ADVERTISEMENT

ಫ್ರೆಂಚ್ ಓಪನ್ ಟೆನಿಸ್ ಅರ್ಹತಾ ಟೂರ್ನಿ: ಸೋತ ಅಂಕಿತಾ ರೈನಾ

ಪಿಟಿಐ
Published 26 ಮೇ 2021, 22:14 IST
Last Updated 26 ಮೇ 2021, 22:14 IST
ಅಂಕಿತಾ ರೈನಾ –ಎಎಫ್‌ಪಿ ಚಿತ್ರ
ಅಂಕಿತಾ ರೈನಾ –ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಭಾರತದ ಅಂಕಿತಾ ರೈನಾ ಅವರು ಫ್ರೆಂಚ್ ಓಪನ್ ಟೆನಿಸ್ ಅರ್ಹತಾ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತಿನ ಪಂದ್ಯದಲ್ಲೂ ಅವರು ನಿರಾಸೆ ಅನುಭವಿಸಿದರು.

ಜರ್ಮನಿಯ ಗ್ರೀಟ್ ಮಿನ್ನೆನ್‌ ಎದುರು ಕಣಕ್ಕಿಳಿದಿದ್ದ ಅಂಕಿತಾ, ಪಂದ್ಯದಲ್ಲಿ ಕೇವಲ ಎರಡು ಗೇಮ್‌ಗಳನ್ನು ಮಾತ್ರ ಗೆಲ್ಲುವಲ್ಲಿ ಸಾಧ್ಯವಾಯಿತು. ಒಂದು ತಾಸು 21 ನಿಮಿಷಗಳಲ್ಲಿ ಮುಗಿದ ಹಣಾಹಣಿಯಲ್ಲಿ ಭಾರತದ ಆಟಗಾರ್ತಿ 2–6, 0–6ರಿಂದ ಸೋಲನುಭವಿಸಿದರು.

ಗ್ರ್ಯಾನ್‌ಸ್ಲಾಮ್ ಟೂರ್ನಿ ಯೊಂದರ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತು ಪ್ರವೇಶಿಸಲು ಅಂಕಿತಾ ಅವರು ನಡೆಸಿದ ಏಳನೇ ಪ್ರಯತ್ನ ಇದಾಗಿತ್ತು.

ADVERTISEMENT

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ಓಪನ್ ಅರ್ಹತಾ ಟೂರ್ನಿಯಲ್ಲಿ ಅವರು ಕೊನೆಯ ಸುತ್ತು ಪ್ರವೇಶಿಸಿ ಸೋತಿದ್ದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಾಮಕುಮಾರ್ ರಾಮನಾಥನ್ ಮತ್ತು ಸುಮಿತ್ ನಗಾಲ್ ಅವರು ಈಗಾಗಲೇ ಎರಡನೇ ಸುತ್ತು ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.