ADVERTISEMENT

ನೊವಾಕ್‌ ಅರ್ಜಿ ವಜಾಗೆ ಕಾರಣ ಹೇಳಲಿದೆ ಅಸ್ಟ್ರೇಲಿಯಾದ ನ್ಯಾಯಾಲಯ

ರಾಯಿಟರ್ಸ್
Published 19 ಜನವರಿ 2022, 13:16 IST
Last Updated 19 ಜನವರಿ 2022, 13:16 IST
ನೊವಾಕ್ ಜೊಕೊವಿಚ್ -ಎಎಫ್‌ಪಿ ಚಿತ್ರ
ನೊವಾಕ್ ಜೊಕೊವಿಚ್ -ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಲಸಿಕೆ ಹಾಕಿಸಿಕೊಳ್ಳದೇ ದೇಶ ಪ್ರವೇಶಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ವೀಸಾ ರದ್ದತಿಗೆ ಸಂಬಂಧಿಸಿದ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಲು ಕಾರಣಗಳೇನು ಎಂಬುದನ್ನು ಅಸ್ಟ್ರೇಲಿಯಾದ ಫೆಡರಲ್ ನ್ಯಾಯಾಲಯ ಗುರುವಾರ ತಿಳಿಸಲಿದೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡಲು ಬಂದಿದ್ದ ಜೊಕೊವಿಚ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು ಅವರ ವೀಸಾವನ್ನು ರದ್ದು ಮಾಡಿದ್ದರು. ಜೊಕೊವಿಚ್ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಪರವಾಗಿ ತೀರ್ಪು ನೀಡಿದ್ದ ನ್ಯಾಯಾಲಯ ಹೋಟೆಲ್‌ನಿಂದ ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಆದರೆ ಆಸ್ಟ್ರೇಲಿಯಾವು ಎರಡನೇ ಬಾರಿ ಅವರ ವೀಸಾ ರದ್ದು ಮಾಡಿತ್ತು. ಇದಕ್ಕೆ ಸಂಬಂಧಿಸಿದ ಜೊಕೊವಿಚ್ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಈ ಕುರಿತು ಗುರುವಾರ ನಡೆಯಲಿರುವ ಕಲಾಪದಲ್ಲಿ ಮುಖ್ಯ ನ್ಯಾಯಮೂರ್ತಿ ಜೇಮ್ಸ್‌ ಅಲ್ಸಾಪ್ ಮಾಹಿತಿ ನೀಡಲಿದ್ದು ಇದರ ನೇರ ಪ್ರಸಾರವೂ ಇರುತ್ತದೆ.

ADVERTISEMENT

11 ದಿನ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಜೊಕೊವಿಚ್ ಪ್ರಕರಣಕ್ಕೆ ಸಂಬಂಧಿಸಿ ಅವರ ಅಭಿಮಾನಿಗಳು ತವರಿನಲ್ಲೂ ಅಸ್ಟ್ರೇಲಿಯಾದಲ್ಲೂ ಪ್ರತಿಭಟನೆ ನಡೆಸಿದ್ದರು. ಆಸ್ಟ್ರೇಲಿಯನ್ ಓಪನ್ ಟೂರ್ನಿ ಆರಂಭವಾಗುವ ಒಂದು ದಿನದ ಹಿಂದೆ ಜೊಕೊವಿಚ್‌ ದುಬೈ ಮೂಲಕ ತರವರಿಗೆ ವಾಪಸಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.