ADVERTISEMENT

ಇಂದಿನಿಂದ ಫ್ರೆಂಚ್ ಓಪನ್: ನಡಾಲ್‌, ಸೆರೆನಾ ಮೇಲೆ ಕಣ್ಣು‌

ಏಜೆನ್ಸೀಸ್
Published 26 ಸೆಪ್ಟೆಂಬರ್ 2020, 21:11 IST
Last Updated 26 ಸೆಪ್ಟೆಂಬರ್ 2020, 21:11 IST
ರಾಲೆಂಡ್ ಗ್ಯಾರೋಸ್‌ನ ಮಣ್ಣಿನಂಕಣದಲ್ಲಿ ಈ ಬಾರಿ ಆಟಗಾರರಿಗೆ ಹೊಸ ಸವಾಲು ಎದುರಾಗಿದೆ –ಎಎಫ್‌ಪಿ ಸಂಗ್ರಹ ಚಿತ್ರ
ರಾಲೆಂಡ್ ಗ್ಯಾರೋಸ್‌ನ ಮಣ್ಣಿನಂಕಣದಲ್ಲಿ ಈ ಬಾರಿ ಆಟಗಾರರಿಗೆ ಹೊಸ ಸವಾಲು ಎದುರಾಗಿದೆ –ಎಎಫ್‌ಪಿ ಸಂಗ್ರಹ ಚಿತ್ರ   

ಪ್ಯಾರಿಸ್: ಕೊರೊನಾ ಕಾಲಿಟ್ಟ ನಂತರ ಪ್ರಮುಖ ಟೆನಿಸ್ ಪಟುಗಳು ಪಾಲ್ಗೊಳ್ಳುವ ಮೊದಲ ಟೂರ್ನಿಯಾದ ಫ್ರೆಂಚ್ ಓಪನ್‌ ಭಾನುವಾರ ಆರಂಭಗೊಳ್ಳಲಿದ್ದು ಪುರುಷರ ವಿಭಾಗದಲ್ಲಿ ಸ್ಪೇನ್‌ನ ರಫೆಲ್ ನಡಾಲ್, ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಮಹಿಳೆಯರ ವಿಭಾಗದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರೋಲ್ಯಾಂಡ್‌ ಗ್ಯಾರೋಸ್‌ನ ಮಣ್ಣಿನಂಕಣದಲ್ಲಿ ಪ್ರತಿ ವರ್ಷ ಜೂನ್–ಜುಲೈ ತಿಂಗಳಲ್ಲಿ ಟೂರ್ನಿ ನಡೆಯುತ್ತದೆ. ಈ ವರ್ಷ ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಕಳೆದ ತಿಂಗಳಲ್ಲಿ ಅಮೆರಿಕ ಓಪನ್ ಟೂರ್ನಿ ನಡೆದಿತ್ತಾದರೂ ಪ್ರಮುಖ ಆಟಗಾರರು ಪಾಲ್ಗೊಂಡಿರಲಿಲ್ಲ. ಅಮೆರಿಕ ಓಪನ್‌ನಲ್ಲಿ ವಿವಾದ ಎಬ್ಬಿಸಿ ಹೊರಗೆ ಬಿದ್ದ ವಿಶ್ವದ ಅಗ್ರಕ್ರಮಾಂಕದ ನೊವಾಕ್ ಜೊಕೊವಿಚ್‌, ಪ್ರಶಸ್ತಿ ಗೆದ್ದ ಡೊಮಿನಿಕ್ ಥೀಮ್,ಇಟಾಲಿಯನ್ ಓಪನ್‌ನಲ್ಲಿ ನೀರಸ ಆಟವಾಡಿದ ನಡಾಲ್ ಪ್ರಮುಖ ಆಕರ್ಷಣೆಯಾಗಿದ್ದಾರೆ.

ADVERTISEMENT

ಅಮೆರಿಕ ಓಪನ್‌ನ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಜಪಾನ್‌ನ ನವೊಮಿ ಒಸಾಕ ಇಲ್ಲಿ ಕಣಕ್ಕಿಳಿಯುತ್ತಿಲ್ಲ. ಪ್ರಶಸ್ತಿ ಸುತ್ತು ಪ್ರವೇಶಿಸಲು ವಿಫಲರಾದ ಸೆರೆನಾ ವಿಲಿಯಮ್ಸ್ ಇಲ್ಲಿ ಪುಟಿದೇಳುವರೇ ಎಂಬುದು ಕುತೂಹಲ ಮೂಡಿಸಿರುವ ಅಂಶ.

ಕಣದಲ್ಲಿರುವ ಅಗ್ರ ಐವರು ಆಟಗಾರರು (ಆವರಣದಲ್ಲಿ ರ‍್ಯಾಂಕ್‌):ನೊವಾಕ್‌ ಜೊಕೊವಿಚ್‌–ಸರ್ಬಿಯಾ (1); ರಫೆಲ್ ನಡಾಲ್–ಸ್ಪೇನ್ (2); ಡೊಮಿನಿಕ್ ಥೀಮ್–ಆಸ್ಟ್ರಿಯಾ (3); ಡ್ಯಾನಿಲ್ ಮೆಡ್ವೆಡೆವ್–ರಷ್ಯಾ (5);ಸ್ಟೆಫನೊಸ್ ಸಿಸಿಪಸ್–ಗ್ರೀಸ್ (6);

ಅಗ್ರ ಐವರು ಆಟಗಾ ರ್ತಿಯರು:ಸಿಮೋನಾ ಹಲೆಪ್–ರೊಮೇನಿಯಾ (2); ಕರೊಲಿನಾ ಪ್ಲಿಸ್ಕೋವ–ಜೆಕ್ ಗಣರಾಜ್ಯ (4); ಸೋಫಿಯಾ ಕೆನಿನ್–ಅಮೆರಿಕ (5); ಎಲಿನಾ ಸ್ವಿಟೋಲಿನಾ–ಉಕ್ರೇನ್‌ (6); ಕಿಕಿ ಬೆರ್ಟೆನ್ಸ್‌–ನೆದರ್ಲೆಂಡ್ಸ್‌ (8);

ಪಂದ್ಯಗಳ ಅರಂಭ: ಮಧ್ಯಾಹ್ನ 2.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.