ADVERTISEMENT

ಎರಡನೇ ಸುತ್ತಿಗೆ ಕರ್ಮನ್‌ ಕೌರ್‌

ಚೆನ್ನೈ ಓಪನ್ ಟೆನಿಸ್‌ ಟೂರ್ನಿ: ಕ್ಲೊಯ್‌ ಪಕೆಟ್‌ಗೆ ಆಘಾತ

ಪಿಟಿಐ
Published 13 ಸೆಪ್ಟೆಂಬರ್ 2022, 12:31 IST
Last Updated 13 ಸೆಪ್ಟೆಂಬರ್ 2022, 12:31 IST
ಕರ್ಮನ್‌ ಕೌರ್ ಥಂಡಿ ಆಟದ ಪರಿ– ಪಿಟಿಐ ಚಿತ್ರ
ಕರ್ಮನ್‌ ಕೌರ್ ಥಂಡಿ ಆಟದ ಪರಿ– ಪಿಟಿಐ ಚಿತ್ರ   

ಚೆನ್ನೈ: ಎಂಟನೇ ಶ್ರೇಯಾಂಕದ ಕ್ಲೊಯ್ ಪಕೆಟ್‌ ಅವರಿಗೆ ಆಘಾತ ನೀಡಿದ ಭಾರತದ ಕರ್ಮನ್‌ ಕೌರ್ ಥಂಡಿ, ಚೆನ್ನೈ ಓಪನ್‌ ಡಬ್ಲ್ಯುಟಿಎ ಟೆನಿಸ್‌ ಟೂರ್ನಿಯ ಎರಡನೇ ಸುತ್ತಿಗೆ ಕಾಲಿಟ್ಟರು.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿಸೋಮವಾರ ಕರ್ಮನ್‌4-6 6-4 6-3ರಿಂದ ಫ್ರಾನ್ಸ್‌ನ ಕ್ಲೊಯ್ ಅವರನ್ನು ಮಣಿಸಿದರು. ಇದರೊಂದಿಗೆ ತಮ್ಮ ವೃತ್ತಿಜೀವನದ ಶ್ರೇಷ್ಠ ಗೆಲುವು ದಾಖಲಿಸಿದರು.

ಜಿದ್ದಾಜಿದ್ದಿನ ಪಂದ್ಯದಲ್ಲಿ ಮೊದಲ ಸೆಟ್‌ ಕೈಚೆಲ್ಲಿದ ಬಳಿಕ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ವೇಗದ ಸರ್ವ್‌ಗಳನ್ನು ಪ್ರಯೋಗಿಸುವ ಮೂಲಕ ವಿಶ್ವ ರ‍್ಯಾಂಕಿಂಗ್‌ನಲ್ಲಿ 109ನೇ ಸ್ಥಾನದಲ್ಲಿರುವ ಆಟಗಾರ್ತಿಯನ್ನು ಕಂಗೆಡಿಸಿದರು.

ADVERTISEMENT

ಮೂರನೇ ಸೆಟ್‌ನಲ್ಲಿ ಮತ್ತಷ್ಟು ಚುರುಕಿನ ಆಟದ ಮೂಲಕ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.

‘ಇದು ಖಂಡಿತವಾಗಿಯೂ ದೊಡ್ಡ ಜಯ. ಮೊದಲ ಸೆಟ್‌ ಸೋತರೂ ಪುಟಿದೇಳುವ ವಿಶ್ವಾಸ ಇತ್ತು. ತವರಿನ ಅಭಿಮಾನಿಗಳ ಬೆಂಬಲವೂ ಬಹಳಷ್ಟಿತ್ತು‘ ಎಂದು ಪಂದ್ಯದ ಬಳಿಕಕರ್ಮನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.