ಬ್ರಿಟನ್‌ನ ಬಿಲಿ ಹ್ಯಾರಿಸ್, 16ರ ಘಟ್ಟದ ಸಿಂಗಲ್ಸ್ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಪರಿ
ಚಿತ್ರ: ಪುಷ್ಕರ್ ವಿ.
ಬೆಂಗಳೂರು: ಕೊನೆ ಗಳಿಗೆಯಲ್ಲಿ ಭಾರತದಲ್ಲಿ ಈ ವರ್ಷದ ನಾಲ್ಕನೇ ಟೂರ್ನಿಯನ್ನು ಆಡುವ ನಿರ್ಧಾರಕ್ಕೆ ಬಂದ ಬ್ರಿಟನ್‌ನ ಬಿಲಿ ಹ್ಯಾರಿಸ್, ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ 125 ಮಟ್ಟದ ಟೂರ್ನಿಯಲ್ಲಿ ಯಶಸ್ಸಿನ ಓಟ ಮುಂದುವರಿಸಿದರು. ಬುಧವಾರ ಅವರು ಝೆಕ್ ರಿಪಬ್ಲಿಕ್‌ನ ಆಟಗಾರ ಮೆರೆಕ್ ಜೆಂಜೆಲ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಅಂತಿಮ ಎಂಟರ ಘಟ್ಟ ತಲುಪಿದರು.
ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ, ನಾಟಿಂಗ್‌ಹ್ಯಾಮ್‌ನ ಹ್ಯಾರಿಸ್ 6–4, 6–3 ರಿಂದ ಮರೆಕ್ ಅವರನ್ನು ಮಣಿಸಿದರು.
30 ವರ್ಷ ವಯಸ್ಸಿನ ಹ್ಯಾರಿಸ್ ಅವರ ಟೆನಿಸ್ ಬದುಕಿನ ಆರಂಭದ ವರ್ಷಗಳಲ್ಲಿ ತಮ್ಮ ಸಾಹಸಗಳ ಮೂಲಕ ಗಮನ ಸೆಳೆದರು. 3–4 ವರ್ಷ ಫೋರ್ಡ್ ಟ್ರಾನ್ಸಿಟ್ ವ್ಯಾನ್ ಮೂಲಕ ಯುರೋಪಿನ ಇತರ
ದೇಶಗಳನ್ನು ಸುತ್ತಿ ಫ್ಯೂಚರ್ ಟೂರ್ನಿಗಳಲ್ಲಿ ಆಡುತ್ತಿದ್ದರು.
ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 110ನೇ ಸ್ಥಾನದಲ್ಲಿರುವ ಅವರ ಗುರಿ ಅಗ್ರ 100ರಲ್ಲಿ ಸ್ಥಾನ ಪಡೆಯುವುದು. 2024ರ ಸೆಪ್ಟೆಂಬರ್‌ನಲ್ಲಿ ಜೀವನ ಶ್ರೇಷ್ಠ ರ್‍ಯಾಂಕಿಂಗ್ 101 ತಲುಪಿದ್ದರು.
ಈ ಟೂರ್ನಿಯಲ್ಲಿ ಕೊನೆಗಳಿಗೆಯಲ್ಲಿ ಕ್ವಾಲಿಫೈಯಿಂಗ್ ವಿಭಾಗದಲ್ಲಿ ಆಡುವ ಅವಕಾಶ ಪಡೆದ ಹ್ಯಾರಿಸ್ ಎರಡನೇ ಸುತ್ತಿನಲ್ಲಿ ಸೋಲನುಭವಿಸಿದ್ದರು. ಆದರೆ ಪ್ರಧಾನ ಸುತ್ತಿನಲ್ಲಿ ಆಡಬೇಕಾಗಿದ್ದ ಕೆನಡಾದ ಅಲೆಕ್ಸಿಸ್ ಗಲರ್ನೆ ಹಿಂದೆಸರಿದ ಕಾರಣ ‘ಲಕ್ಕಿ ಲೂಸರ್’ ಆಗಿ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿದ್ದರು!
ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಜೇಮ್ಸ್ ಮೆಕ್‌ಕ್ಯಾಬ್7–5, 5–7, 7–6 (5) ರಿಂದ ಜಪಾನ್‌ನ ರಿಯೊ ನೊಗುಚಿ ಅವರನ್ನು, ಶ್ರೇಯಾಂಕರಹಿತ ಆಟಗಾರ, ಕೊಲಂಬಿಯಾದ ನಿಕೋಲಸ್ ಮೆಹಿಯಾ 6–1, 7–5 ರಿಂದ ಆಸ್ಟ್ರೇಲಿಯಾದ ಬ್ಲೇಕ್ ಎಲಿಸ್ ಅವರನ್ನು, ಎರಡನೇ ಶ್ರೇಯಾಂಕದ ಟ್ರಿಸ್ಟನ್ ಸ್ಕೂಲ್ಕೇಟ್ (ಆಸ್ಟ್ರೇಲಿಯಾ) ಅವರು 6–3, 3–6, 6–2 ರಿಂದ ಜುರಿಜ್ ರೊಡಿಒನೊವ್ ಅವರನ್ನು ಹಿಮ್ಮೆಟ್ಟಿಸಿ ಕ್ವಾರ್ಟರ್‌ಫೈನಲ್ ತಲುಪಿದರು.
ಎಂಟರ ಘಟ್ಟಕ್ಕೆ ರಾಮಕುಮಾರ್–ಮೈನೇನಿ:ಭಾರತದ ರಾಮಕುಮಾರ್ ರಾಮನಾಥನ್ –ಸಾಕೇತ್ ಮೈನೇನಿ ಜೋಡಿ ಡಬಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6–3, 7–6 (4) ರಿಂದ ಇಟಲಿಯ ಜಾಕೊಪೊ ಬೆರೆಟ್ಟಿನಿ– ಎನ್ರಿಕೊ ಡೆಲ್ಲಾವಲ್ ಜೋಡಿಯನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಿತು. ರಾಮಕುಮಾರ್–ಸಾಕೇತ್ ಮುಂದಿನ ಸುತ್ತಿನಲ್ಲಿ ಹೈನೆಟ್ ಬಾರ್ಟನ್ (ಝೆಕ್ ರಿಪಬ್ಲಿಕ್)– ಎರಿಕ್ ವನ್ಷೆಲ್‌ಬೊಯಿಮ್ (ಉಕ್ರೇನ್) ಅವರನ್ನು ಎದುರಿಸಲಿದ್ದಾರೆ. ಈ ಜೋಡಿ 6–3, 1–6, 13–11 ರಿಂದ ಜೊಹಾನೆಸ್ ಇಂಗ್ಲಿಂಡ್ಸೆನ್ (ಡೆನ್ಮಾರ್ಕ್)– ಇವಾನ್ ಲಿಯುಟರೆವಿಚ್ (ಬೆಲಾರೂಸ್) ಅವ ರನ್ನು ಸೋಲಿಸಿತು.
ಇದಕ್ಕೆ ಮೊದಲು ಅಗ್ರ ಶ್ರೇಯಾಂಕದ ಅನಿರುದ್ಧ ಚಂದ್ರಶೇಖರ್ (ಭಾರತ) – ರೇ ಹೊ (ತೈವಾನ್) ಜೋಡಿ 6–4, 6–4 ರಿಂದ ಸಾಯಿ ಕಾರ್ತಿಕ್ ರೆಡ್ಡಿ (ಭಾರತ)– ಖುಮೊಯುನ್ ಸುಲ್ತಾನೋವ್ (ಉಜ್ಬೇಕಿಸ್ತಾನ) ಜೋಡಿಯನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿತು.
ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಅದಿಲ್ ಕಲ್ಯಾಣಪುರ್– ಕರಣ್ ಸಿಂಗ್ ಜೋಡಿ 1–6, 6–2, 10–4 ರಿಂದ ನಿತಿನ್ ಕುಮಾರ್ ಸಿನ್ಹಾ–ಮನಿಷ್ ಸುರೇಶ್ ಕುಮಾರ್ ಜೋಡಿಯನ್ನು ಮಣಿಸಿತು.
ಎಂಟರ ಘಟ್ಟಕ್ಕೆ ರಾಮಕುಮಾರ್–ಮೈನೇನಿ
ಭಾರತದ ರಾಮಕುಮಾರ್ ರಾಮನಾಥನ್ –ಸಾಕೇತ್ ಮೈನೇನಿ ಜೋಡಿ ಡಬಲ್ಸ್ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6–3, 7–6 (4) ರಿಂದ ಇಟಲಿಯ ಜಾಕೊಪೊ ಬೆರೆಟ್ಟಿನಿ– ಎನ್ರಿಕೊ ಡೆಲ್ಲಾವಲ್ ಜೋಡಿಯನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಿತು. ಭಾರತದ ಆಟಗಾರರು ಗೆಲ್ಲಲು ಒಂದು ಗಂಟೆ 14 ನಿಮಿಷ ತೆಗೆದುಕೊಂಡಿತು.
ರಾಮಕುಮಾರ್–ಸಾಕೇತ್ ಮುಂದಿನ ಸುತ್ತಿನಲ್ಲಿ ಹೈನೆಟ್ ಬಾರ್ಟನ್ (ಝೆಕ್ ರಿಪಬ್ಲಿಕ್)– ಎರಿಕ್ ವನ್ಷೆಲ್‌ಬೊಯಿಮ್ (ಉಕ್ರೇನ್) ಅವರನ್ನು ಎದುರಿಸಲಿದ್ದಾರೆ. ಈ ಜೋಡಿ 6–3, 1–6, 13–11 ರಿಂದ ಜೊಹಾನೆಸ್ ಇಂಗ್ಲಿಂಡ್ಸೆನ್ (ಡೆನ್ಮಾರ್ಕ್)– ಇವಾನ್ ಲಿಯುಟರೆವಿಚ್ (ಬೆಲಾರೂಸ್) ಅವರನ್ನು ಸೋಲಿಸಿತು.
ಇದಕ್ಕೆ ಮೊದಲು ಅಗ್ರ ಶ್ರೇಯಾಂಕದ ಅನಿರುದ್ಧ ಚಂದ್ರಶೇಖರ್ (ಭಾರತ) – ರೇ ಹೊ (ತೈವಾನ್) ಜೋಡಿ 6–4, 6–4 ರಿಂದ ಸಾಯಿ ಕಾರ್ತಿಕ್ ರೆಡ್ಡಿ (ಭಾರತ)– ಖುಮೊಯುನ್ ಸುಲ್ತಾನೋವ್ (ಉಜ್ಬೇಕಿಸ್ತಾನ) ಜೋಡಿಯನ್ನು ಮಣಿಸಿ ಎಂಟರ ಘಟ್ಟಕ್ಕೆ ತಲುಪಿತು.
ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಅದಿಲ್ ಕಲ್ಯಾಣಪುರ್– ಕರಣ್ ಸಿಂಗ್ ಜೋಡಿ ಸೆಟ್ ಹಿನ್ನಡೆಯಿಂದ ಚೇತರಿಸಿ 1–6, 6–2, 10–4 ರಿಂದ ನಿತಿನ್ ಕುಮಾರ್ ಸಿನ್ಹಾ–ಮನಿಷ್ ಸುರೇಶ್ ಕುಮಾರ್ ಜೋಡಿಯನ್ನು ಮಣಿಸಿತು. ಅದಿಲ್– ಕರಣ್ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಬ್ಲೇಕ್ ಬೇಲ್ಡನ್– ಮ್ಯಾಥ್ಯೂ ಕ್ರಿಸ್ಟೋಫರ್ ರೊಮಿಯೊಸ್ (ಆಸ್ಟ್ರೇಲಿಯಾ) ಜೋಡಿಯನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.