ADVERTISEMENT

ಕೋವಿಡ್‌: ಮೇ 31ರವರೆಗೆ ಟೆನಿಸ್‌ ಟೂರ್ನಿಗಳು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 12:06 IST
Last Updated 14 ಏಪ್ರಿಲ್ 2021, 12:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 17ರಿಂದ ಮೇ 31ರವರೆಗೆ ಟೆನಿಸ್ ಟೂರ್ನಿಗಳನ್ನು ಸ್ಥಗಿತಗೊಳಿಸಲು ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಬುಧವಾರ ನಿರ್ಧರಿಸಿದೆ.

‘ಕೆಎಸ್‌ಎಲ್‌ಟಿಎಯಲ್ಲಿ ಆಟಗಾರರ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಆಟಗಾರರ ಆರೋಗ್ಯದ ಕುರಿತು ನಾವು ಅಪಾಯವನ್ನು ಮೈಮೇಲೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಸದ್ಯ ನಮ್ಮ ಸಂಸ್ಥೆ ಹಾಗೂಎಐಟಿಎ ಸಹಯೋಗದಲ್ಲಿ ಆಯೋಜಿಸಿದ್ದ ಎಲ್ಲ ಟೂರ್ನಿಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ‘ ಎಂದು ಕೆಎಸ್‌ಎಲ್‌ಟಿಎ ಗೌರವ ಕಾರ್ಯದರ್ಶಿ ಸುನಿಲ್ ಯಜಮಾನ್ ತಿಳಿಸಿದ್ದಾರೆ.

‘ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ತರಬೇತಿ ಹಾಗೂ ಅಭ್ಯಾಸ ಮುಂದುವರಿಯಲಿವೆ‘ ಎಂದು ಸುನಿಲ್ ಹೇಳಿದರು.

ADVERTISEMENT

ಯಾವುದೇ ಖಾಸಗಿ ಟೂರ್ನಿಗಳನ್ನು ಆಯೋಜಿಸದಂತೆ ಅಕಾಡೆಮಿಗಳು ಹಾಗೂ ಕೋಚ್‌ಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.