ADVERTISEMENT

Miami Open: ಶ್ವಾಂಟೆಕ್‌ಗೆ ಅಯಾಲಾ ಆಘಾತ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 0:18 IST
Last Updated 28 ಮಾರ್ಚ್ 2025, 0:18 IST
   

ಮಯಾಮಿ (ಅಮೆರಿಕ),: ಎರಡು ವರ್ಷಗಳ ಹಿಂದೆ ರಫಾ ನಡಾಲ್ ಅಕಾಡೆಮಿಯಲ್ಲಿ ಫಿಲಿಪೀನ್ಸ್‌ ಆಟಗಾರ್ತಿ ಅಲೆಕ್ಸಾಂಡ್ರಾ ಅಯಾಲಾ ಅವರು ತಮ್ಮ ಅಚ್ಚುಮೆಚ್ಚಿನ ಆಟಗಾರ್ತಿ ಇಗಾ ಶ್ವಾಂಟೆಕ್‌ ಅವರನ್ನು ಮೊದಲ ಸಲ ಭೇಟಿಯಾಗಿದ್ದರು. ಆ ಸಂಭ್ರಮದಲ್ಲಿ ಅವರಿಗೆ ಮಾತೇ ಹೊರಟಿರಲಿಲ್ಲ. ಆದರೆ ಬುಧವಾರ ಮಯಾಮಿ ಓಪನ್‌ನಲ್ಲಿ, ವೈಲ್ಡ್‌ಕಾರ್ಡ್‌ ಪ್ರವೇಶಿತೆ ಅಯಾಲಾ ದಾಕ್ಷಿಣ್ಯ ತೋರದೇ ತಾವು ಆರಾಧಿಸುವ ಆಟಗಾರ್ತಿ
ಯನ್ನು ಸೋಲಿಸಿ ಸಿಂಗಲ್ಸ್ ಸೆಮಿಫೈನಲ್ ತಲುಪಿದರು.

19 ವರ್ಷ ವಯಸ್ಸಿನ ಅಯಾಲಾ ಕ್ವಾರ್ಟರ್‌ಫೈನಲ್‌ನಲ್ಲಿ 6–2, 7–5 ರಿಂದ ವಿಶ್ವದ ಎರಡನೇ ಕ್ರಮಾಂಕದ ಆಟಗಾರ್ತಿಯನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು. ತಮ್ಮ ಸಾಹಸ ನಂಬಲಾಗದ ಅವರು ಬಾವೋದ್ವೇಗಕ್ಕೆ ಒಳಗಾದರು. ಇದು ಫಿಲಿಪೀನ್ಸ್‌ ಆಟಗಾರ್ತಿಗೆ ಮೊದಲ ಡಬ್ಲ್ಯುಟಿಎ ಸೆಮಿಫೈನಲ್ ಆಗಿದೆ.

ಸ್ಲೇನ್‌ನ ಮೆಲೋರ್ಕಾದಲ್ಲಿರುವ  ನಡಾಲ್‌ ಅಕಾಡೆಮಿಯಲ್ಲಿ ಪ್ರಮಾಣಪತ್ರ  ನೀಡುವ ಸಮಾರಂಭದಲ್ಲಿ ಶ್ವಾಂಟೆಕ್‌  ವಿಶೇಷ ಆಹ್ವಾನಿತೆಯಾಗಿ ಮಾತನಾಡಿದರು. ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳನ್ನು ಗೆದ್ದು ಸೆಲೆಬ್ರಿಟಿ ಸಹ ಆಗಿದ್ದರು. ಬುಧವಾರ ಅಯಾಲಾ ಅವರು ಅದೇ ಆಟಗಾರ್ತಿಯನ್ನು ನೆಟ್ಸ್‌ನ ಆಚೆ ಎದುರಾಳಿಯಾಗಿ ಕಂಡಾಗ ಅವರಿಗೆ ಅದು ಕನಸಿನಂತೆ ಭಾಸವಾಯಿತು.

ADVERTISEMENT

ಪೆಗುಲಾ ಮುನ್ನಡೆ: ಅಮೆರಿಕದ ಜೆಸಿಕಾ ಪೆಗುಲಾ ಮೂರು ಸೆಟ್‌ಗಳ ಹೋರಾಟ
ದಲ್ಲಿ 6–4, 6–7 (3), 6–2ರಿಂದ ಬ್ರಿಟನ್‌ನ ಎಮ್ಮಾ ರಾಡುಕಾನು ಅವರನ್ನು ಹಿಮ್ಮೆಟ್ಟಿಸಿ ಸೆಮಿಫೈನಲ್ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.