ADVERTISEMENT

ಟೆನಿಸ್‌: ಪ್ರಣವ್‌, ಶ್ರೀನಿತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2022, 19:32 IST
Last Updated 10 ಜೂನ್ 2022, 19:32 IST
ಶ್ರೀನಿತಿ ಚೌಧರಿ ಮತ್ತು ಪ್ರಣವ್ ಎಂ.ಎಸ್‌. ಪ್ರಶಸ್ತಿಯೊಂದಿಗೆ
ಶ್ರೀನಿತಿ ಚೌಧರಿ ಮತ್ತು ಪ್ರಣವ್ ಎಂ.ಎಸ್‌. ಪ್ರಶಸ್ತಿಯೊಂದಿಗೆ   

ಬೆಂಗಳೂರು: ಪ್ರಣವ್ ಎಂ.ಎಸ್‌. ಮತ್ತು ಶ್ರೀನಿತಿ ಚೌಧರಿ ಅವರು ಎಐಟಿಎ ಸಿಎಸ್‌7 16 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸೇಂಟ್‌ ಪೀಟರ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಶ್ರೀನಿತಿ, ಶುಕ್ರವಾರ ಬಾಲಕಿಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 6–0, 7–5ರಿಂದ ಕಸ್ತೂರಿ ಜಿ. ಅವರನ್ನು ಸೋಲಿಸಿದರು.

ಬಾಲಕರ ಸಿಂಗಲ್ಸ್ ಪ್ರಶಸ್ತಿ ಸುತ್ತಿನಲ್ಲಿ ಪ್ರಣವ್‌6-4, 0-6, 7-6 (5)ರಿಂದ ಅಭ್ರದೀಪ್ ಭಟ್ಟಾಚಾರ್ಯ ಅವರನ್ನು ಸೋಲಿಸಿದರು. ಪ್ರಣವ್‌ ಜೈನ್ ಸ್ಪೋರ್ಟ್ಸ್ ಸ್ಕೂಲ್‌ನ ವಿದ್ಯಾರ್ಥಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.