ADVERTISEMENT

ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಖಚಿತ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 16:13 IST
Last Updated 18 ನವೆಂಬರ್ 2020, 16:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಲ್ಬರ್ನ್ (ಎಪಿ): ಮುಂದಿನ ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯನ್ನು ನಡೆಸಲು ವಿಕ್ಟೋರಿಯನ್ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ಅನುಮತಿ ನೀಡುವುದನ್ನು ಕಾಯುತ್ತಿದ್ದೇವೆ ಎಂದು ಟೆನಿಸ್ ಆಸ್ಟ್ರೇಲಿಯಾ ತಿಳಿಸಿದೆ.

ಮೆಲ್ಬರ್ನ್ ಪಾರ್ಕ್‌ನಲ್ಲಿ ಜನವರಿ 18 ರಿಂದ 31ರವರೆಗೆ ಟೂರ್ನಿ ನಡೆಯಲಿದೆ. ಆಸ್ಟ್ರೇಲಿಯಾದ ಹಲವೆಡೆ ಕೊರೊನಾ ವೈರಸ್‌ ಹಾವಳಿ ಹೆಚ್ಚುತ್ತಿರುವುದರ ನಡುವೆಯೂ ಆಯೋಜಕರು ಟೂರ್ನಿಯನ್ನು ನಡೆಸುವ ವಿಶ್ವಾಸದಲ್ಲಿದ್ದಾರೆ.

ಕ್ವಾರಂಟೈನ್ ನಿಯಮ ಪಾಲಿಸಲು ಆಟಗಾರರು ಡಿಸೆಂಬರ್‌ ಮೂರನೇ ವಾರದಲ್ಲಿಯೇ ಆಸ್ಟ್ರೇಲಿಯಾಕ್ಕೆ ಬರಬೇಕು. ಜೊತೆಗೆ ವಿಶೇಷ ತರಬೇತಿ ತಾಣದಲ್ಲಿ ಅಭ್ಯಾಸ ನಡೆಸಬೇಕು.

ADVERTISEMENT

’ಕಳೆದ 24 ಗಂಟೆಗಳಲ್ಲಿ ಟೆನಿಸ್ ಆಸ್ಟ್ರೇಲಿಯಾದೊಂದಿಗೆ ಹಲವು ಸುತ್ತುಗಳ ಚರ್ಚೆ ನಡೆಸಿದ್ದೇವೆ. ಆಟಗಾರರ ಸುರಕ್ಷತೆ ಮತ್ತು ವಸತಿ , ಪ್ರಯಾಣ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕೆಲವು ಹೊಸ ಸವಾಲುಗಳಿವೆ. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಆಯೋಜಕರ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ. ಜನವರಿಯಲ್ಲಿಯೇ ಟೂರ್ನಿ ನಡೆಸುವ ಕುರಿತ ಖಚಿತ ಮಾಹಿತಿಯನ್ನು ನೀಡುತ್ತೇವೆ‘ ಎಂದು ಎಟಿಪಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.