ಮ್ಯಾಡ್ರಿಡ್: ಪಕ್ಕೆಲುಬಿನಲ್ಲಿ ಉಂಟಾದ ನೋವಿನ ಹಿನ್ನೆಲೆಯಲ್ಲಿ ನಾಲ್ಕರಿಂದ ಆರು ವಾರಗಳ ಕಾಲ ಟೆನಿಸ್‌ನಿಂದ ದೂರ ಇರುವುದಾಗಿ ಸ್ಪೇನ್‌ನ ರಫೆಲ್ ನಡಾಲ್ ಹೇಳಿದ್ದಾರೆ.
‘ಇದು ಒಳ್ಳೆಯ ಸುದ್ದಿಯಲ್ಲ. ಇದನ್ನು ನಾನು ನಿರೀಕ್ಷಿಸಿರಲಿಲ್ಲ‘ ಎಂದು ಮಂಗಳವಾರ ನಡಾಲ್ ಟ್ವೀಟ್ ಮಾಡಿದ್ದಾರೆ.
ಮೊಂಟೆ ಕಾರ್ಲೊ ಮತ್ತು ಬಾರ್ಸಿಲೋನಾ ಟೂರ್ನಿಗಳಿಂದ ಅವರು ಹೊರಗುಳಿಯಲಿದ್ದು, ಮೇ 1ರಿಂದ 8ರವರೆಗೆ ನಡೆಯಲಿರುವ ಮ್ಯಾಡ್ರಿಡ್ ಓಪನ್‌ಗೆ ಮರಳುವ ಸಾಧ್ಯತೆಯಿದೆ.
ಮೇ 22ರಿಂದ ಆರಂಭವಾಗುವ ಫ್ರೆಂಚ್ ಓಪನ್ ಟೂರ್ನಿಯ ಮೇಲೆ ನಡಾಲ್ ಕಣ್ಣಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.