
ಪಿಟಿಐ
ಲಾಸೆನ್, ಸ್ವಿಟ್ಜರ್‌ಲೆಂಡ್: ಟೆನಿಸ್ ಕ್ರೀಡೆಯ ದಿಗ್ಗಜ ಆಟಗಾರ ರೋಜರ್ ಫೆಡರರ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದಿಲ್ಲ.
ತಮ್ಮ ಮೊಣಕಾಲಿನ ಗಾಯದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಫೆಡರರ್ ಮಂಗಳವಾರ ತಿಳಿಸಿದ್ದಾರೆ.
‘ನನಗೆ ಅತೀವ ಬೇಸರವಾಗುತ್ತಿದೆ. ದೇಶದ ಪ್ರತಿನಿಧಿಯಾಗಿ ವಿಶ್ವದ ಬಹುದೊಡ್ಡ ಕ್ರೀಡಾಕೂಟದಲ್ಲಿ ಆಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದೇನೆ. ಹುಲ್ಲಿನಂಕಣದ ಋತುವಿನಲ್ಲಿ ಮಂಡಿನೋವು ಕಾಡಿತು. ಅದರಿಂದಾಗಿ ಹಿನ್ನಡೆಯನ್ನೂ ಅನುಭವಿಸಿದೆ‘ ಎಂದು 39 ವರ್ಷದ ಫೆಡರರ್ ಟ್ವೀಟ್ ಮಾಡಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.