ADVERTISEMENT

Rome Masters 2025 | ಎರಡನೇ ಸುತ್ತಿಗೆ ಬೋಪಣ್ಣ– ಆ್ಯಡಂ

​ಪ್ರಜಾವಾಣಿ ವಾರ್ತೆ
Published 13 ಮೇ 2025, 0:30 IST
Last Updated 13 ಮೇ 2025, 0:30 IST
<div class="paragraphs"><p>ರೋಹನ್&nbsp;ಬೋಪಣ್ಣ</p></div>

ರೋಹನ್ ಬೋಪಣ್ಣ

   

ರೋಮ್: ಹಿರಿಯ ಆಟಗಾರ ರೋಹನ್ ಬೋಪಣ್ಣ ಮತ್ತು ಅವರ ಝೆಕ್‌ ರಿಪಬ್ಲಿಕ್‌ನ ಜೊತೆಗಾರ ಆ್ಯಡಂ ಪಾವ್ಲಾಸೆಕ್‌ ಅವರು ರೋಮ್‌ ಮಾಸ್ಟರ್ಸ್‌ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸೋಮವಾರ ಎರಡನೇ ಸುತ್ತಿಗೆ ತಲುಪಿದರು.

ಈ ಜೋಡಿ ಮೊದಲ ಸುತ್ತಿನಲ್ಲಿ 4–6, 7–6 (5), 10–4 ರಿಂದ ಆರನೇ ಶ್ರೇಯಾಂಕದ ನ್ಯೂಜಿಲೆಂಡ್‌ನ ಮೈಕೆಲ್ ವೀನಸ್‌– ಕ್ರೊವೇಷಿಯಾದ ನಿಕೋಲಾ ಮೆಕ್ಟಿಕ್‌ ಜೋಡಿಯನ್ನು ಮಣಿಸಿತು. ಮುಂದಿನ ಸುತ್ತಿನಲ್ಲಿ ರೋಹನ್‌– ಆ್ಯಡಂ ಜೋಡಿ ಬ್ರಿಟನ್‌ನ ಜೊ ಸ್ಯಾಲಿಸ್ಬರಿ– ನೀಲ್‌ ಸ್ಕುಪ್‌ಸ್ಕಿ ಜೋಡಿಯನ್ನು ಎದುರಿಸಲಿದೆ.

ADVERTISEMENT

ಆದರೆ ಯುಕಿ ಭಾಂಬ್ರಿ– ಅವರ ಅಮೆರಿಕನ್ ಜೊತೆಗಾರ ರಾಬರ್ಟ್ ಗಾಲೊವೆ ಮೊದಲ ಸುತ್ತಿನಲ್ಲಿ ಹೊರಬಿದ್ದರು. ಇವರಿಬ್ಬರು ಭಾನುವಾರ  1–6, 2–6ರಲ್ಲಿ ನಾಲ್ಕನೇ ಶ್ರೇಯಾಂಕದ ಮಾರ್ಸೆಲ್‌ ಗ್ರಾನೊಲರ್ಸ್‌ (ಸ್ಪೇನ್‌)– ಹೊರೇಷಿಯೊ ಝೆಬಲೊಸ್‌ (ಅರ್ಜೆಂಟೀನಾ) ಜೋಡಿಗೆ ಮಣಿದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.