ನವದೆಹಲಿ: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ನಾಲ್ಕು ವರ್ಷಗಳ ನಂತರ ಟಾಪ್ಸ್‌ನಲ್ಲಿ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಸ್ಥಾನ ಗಳಿಸಿದ್ದಾರೆ. ಬುಧವಾರ ನಡೆದ ಮಿಷನ್ ಒಲಿಂಪಿಕ್ ಘಟಕದ ಸಭೆಯಲ್ಲಿ ಸಾನಿಯಾ ಅವರನ್ನು ಯೋಜನೆಯಲ್ಲಿ ಸೇರಿಸಲು ನಿರ್ಧರಿಸಲಾಯಿತು ಎಂದು ಭಾರತ ಕ್ರೀಡಾ ಪ್ರಾಧಿಕಾರ ತಿಳಿಸಿದೆ.
ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ, 34 ವರ್ಷದ ಸಾನಿಯಾ 2017ರಲ್ಲಿ ಟಾಪ್ಸ್‌ಗೆ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ಯೋಜನೆಯಿಂದ ದೂರ ಉಳಿಯಲು ನಿರ್ಧರಿಸಿದ್ದರು.
ಮಗುವಿನ ತಾಯಿಯಾಗಿರುವ ಸಾನಿಯಾ ಗರ್ಭಿಣಿಯಾಗಿದ್ದಾಗ ಟೆನಿಸ್ ಅಂಗಣದಿಂದ ದೂರ ಉಳಿದಿದ್ದರು. ಆದರೆ ಡಬ್ಲ್ಯುಟಿಎಯ ವಿಶೇಷ ರ‍್ಯಾಂಕಿಂಗ್ ಮಾನದಂಡದಡಿ ರ‍್ಯಾಂಕಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.