ADVERTISEMENT

ಕ್ರೀಡೆಯಲ್ಲಿ ತಾರತಮ್ಯ: ಸಾನಿಯಾ ಬೇಸರ

ಪಿಟಿಐ
Published 13 ಏಪ್ರಿಲ್ 2019, 17:46 IST
Last Updated 13 ಏಪ್ರಿಲ್ 2019, 17:46 IST
   

ನವದೆಹಲಿ: ಕ್ರೀಡಾಕ್ಷೇತ್ರ ದಲ್ಲಿಇಂದಿಗೂ ನಾವು ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಕುರಿತು ಮಾತನಾಡುತ್ತಿದ್ದೇವೆ ಎಂದರೆ ಪುರುಷ ಜಗತ್ತು ಅಸ್ತಿತ್ವದಲ್ಲಿದೆ ಎನ್ನುವುದು ಸ್ಪಷ್ಟವಾಗಿದೆ ಎಂದುಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

ಕ್ರೀಡೆಗಳಲ್ಲಿಮಹಿಳೆಯರು ಹೆಚ್ಚು ಭಾಗವಹಿಸುವಂತೆ ಮಾಡಲು ಭಾರತವು ಇನ್ನು ಹೆಚ್ಚು ಸಬಲೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದುಶನಿವಾರ ನಡೆದ ಎಫ್‌ಐಸಿಸಿಐ ಮಹಿಳಾ ಸಂಘಟನೆಯ ವಾರ್ಷಿಕೋತ್ಸ ವದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂದು ಮೇರಿ ಕೂಮ್‌, ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ದೀಪಾ ಕರ್ಮಕರ್‌, ಸಾಕ್ಷಿ ಮಲಿಕ್ ಅವರ ಸಾಧನೆಗೆ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಇಷ್ಟು ಸಂಖ್ಯೆಯ ಮಹಿಳಾ ಕ್ರೀಡಾಪಟುಗಳು ಇರಲಿಲ್ಲ.ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ.ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ ಎಂದಿದ್ದಾರೆ.

ADVERTISEMENT

ಎಲ್ಲ ಕ್ರೀಡೆಗಳ ಪ್ರಶಸ್ತಿ ಮೊತ್ತದಲ್ಲಿ ತಾರತಮ್ಯವಿದೆ. ಬದಲಾವಣೆ ಇಲ್ಲಿಂದಲೇ ಆರಂಭವಾದರೆ ಕ್ರೀಡಾಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.