ರಾಷ್ಟ್ರೀಯ ರ‍್ಯಾಂಕಿಂಗ್ ವೀಲ್‌ಚೇರ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ವಿಜೇತ ಶೇಖರ್ ವೀರಸ್ವಾಮಿ
ಬೆಂಗಳೂರು: ಕರ್ನಾಟಕದ ಶೇಖರ್ ವೀರಸ್ವಾಮಿ ಮತ್ತು ಶಿಲ್ಪಾ ಪುಟ್ಟರಾಜು ಅವರು ಇಲ್ಲಿ ನಡೆದ ಮೊದಲ ರಾಷ್ಟ್ರೀಯ ರ‍್ಯಾಂಕಿಂಗ್ ವೀಲ್ ಚೇರ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ನಗರದ ಕೆಎಸ್‌ಎಲ್‌ಟಿಎ ಕೋರ್ಟ್‌ಗಳಲ್ಲಿ ಕರ್ನಾಟಕ ವೀಲ್ ಚೇರ್ ಟೆನಿಸ್ ಸಂಸ್ಥೆ (ಕೆಡಬ್ಲ್ಯೂಟಿಎ), ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಸಹಯೋಗದಲ್ಲಿ ಬುಧವಾರದಿಂದ ನಡೆದ ಟೂರ್ನಿಯಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶೇಖರ್ 6-4, 6-3ರಿಂದ ತಮಿಳುನಾಡಿನ ಕಾರ್ತಿಕ್ ಕರುಣಾಕರನ್ ಅವರನ್ನು ಮಣಿಸಿದರು. ಮಹಿಳೆಯರ ವಿಭಾಗದಲ್ಲಿ ಶಿಲ್ಪಾ 6-4, 6-4ರಿಂದ ತಮ್ಮದೇ ರಾಜ್ಯದ ಪ್ರತಿಮಾ ರಾವ್ ಅವರನ್ನು ಸೋಲಿಸಿದರು. ಶೇಖರ್ ಅವರು ತಮಿಳುನಾಡಿನ ಬಾಲಚಂದರ್ ಸುಬ್ರಮಣಿಯನ್ ಅವರ ಜೊತೆಗೂಡಿ ಪುರುಷರ ಡಬಲ್ಸ್ ಪ‍್ರಶಸ್ತಿ ಗೆದ್ದರು. ಈ ಜೋಡಿ ಫೈನಲ್‌ನಲ್ಲಿ 6-4, 6-1ರಿಂದ ತಮಿಳುನಾಡಿನ ಮರಿಯಪ್ಪನ್ ದೊರೈ ಮತ್ತು ಕಾರ್ತಿಕ್ ಕರುಣಾಕರನ್ ಅವರನ್ನು ಮಣಿಸಿತು.
ಶಿಲ್ಪಾ ಪುಟ್ಟರಾಜು ಅವರು ಶಿಲ್ಪಾ ಕುಡ್ಲಪ್ಪ ಅವರೊಂದಿಗೆ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್ ಆದರು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಈ ಜೋಡಿ 6-3, 6-4 ಪ್ರತಿಮಾ ಮತ್ತು ಮುಬೀನಾ ಕೋಲ್ಕರ್ ಅವರನ್ನು ಸೋಲಿಸಿತು.
ಮಹಿಳಾ ವಿಭಾಗದ ಸಿಂಗಲ್ಸ್ ಪ್ರಶಸ್ತಿ ವಿಜೇತೆ ಶಿಲ್ಪಾ ಪುಟ್ಟರಾಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.