
ಸ್ಟಾನ್ ವಾವ್ರಿಂಕಾ
ಲುಸಾನ್: ಸ್ವಿಟ್ಜರ್ಲೆಂಡ್‌ನ ತಾರಾ ಆಟಗಾರ, ಮೂರು ಬಾರಿಯ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ವಿಜೇತ ಸ್ಟಾನ್ ವಾವ್ರಿಂಕಾ ಅವರು 2026ರಲ್ಲಿ ಟೆನಿಸ್‌ಗೆ ನಿವೃತ್ತಿ ಹೇಳುವುದಾಗಿ ಶುಕ್ರವಾರ ಪ್ರಕಟಿಸಿದ್ದಾರೆ.
‘ಪ್ರತಿಯೊಂದು ಪುಸ್ತಕಕ್ಕೂ ಒಂದು ಅಂತ್ಯವಿರಬೇಕು. ಹಾಗೆಯೇ, ಟೆನಿಸ್ ಆಟಗಾರನಾಗಿ ನನ್ನ ವೃತ್ತಿಬದುಕಿನ ಅಂತಿಮ ಅಧ್ಯಾಯವನ್ನು ಬರೆಯುವ ಸಮಯ ಇದೀಗ ಬಂದೊದಗಿದೆ. ಟೆನಿಸ್ ಪಯಣದಲ್ಲಿ 2026 ಕೊನೆಯ ವರ್ಷವಾಗಲಿದೆ’ ಎಂದು ವಾವ್ರಿಂಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಾವ್ರಿಂಕಾ ಅವರು 2014ರ ಆಸ್ಟ್ರೇಲಿಯಾ ಓಪನ್, 2015ರ ಫ್ರೆಂಚ್ ಓಪನ್ ಹಾಗೂ 2016ರ ಯುಎಸ್ ಓಪನ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದು ‘ಮೇಜರ್ ವಿನ್ನರ್’ ಎನಿಸಿಕೊಂಡಿದ್ದಾರೆ. ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ಅವರಂತಹ ದಿಗ್ಗಜ ಆಟಗಾರರು ಅಮೋಘ ಲಯದಲ್ಲಿದ್ದ ಅವಧಿಯಲ್ಲಿಯೇ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ.
41 ವರ್ಷ ವಯಸ್ಸಿನ ಈ ಆಟಗಾರ ಒಟ್ಟು 16 ಎಟಿಪಿ ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2017ರಲ್ಲಿ ಜಿನೆವಾದಲ್ಲಿ ಚಾಂಪಿಯನ್ ಆದ ನಂತರ ಪ್ರಶಸ್ತಿ ಬರ ಎದುರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.