ADVERTISEMENT

ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌: ತನಿಷ್ಕಾಗೆ ಪ್ರಶಸ್ತಿ ಡಬಲ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 15:59 IST
Last Updated 1 ಸೆಪ್ಟೆಂಬರ್ 2025, 15:59 IST
ವಿಜೇತರು... (ಎಡದಿಂದ): ರಾಶಿ ರಾವ್‌, ತನಿಷ್ಕಾ ಕಪಿಲ್ ಕಾಲಭೈರವ, ರೇಯಾನ್ಶ್ ಜಲನ್‌ ಮತ್ತು ಗೌರವ್‌ ಗೌಡ
ವಿಜೇತರು... (ಎಡದಿಂದ): ರಾಶಿ ರಾವ್‌, ತನಿಷ್ಕಾ ಕಪಿಲ್ ಕಾಲಭೈರವ, ರೇಯಾನ್ಶ್ ಜಲನ್‌ ಮತ್ತು ಗೌರವ್‌ ಗೌಡ   

ಬೆಳಗಾವಿ: ಯಶಸ್ಸಿನ ಓಟ ಮುಂದುವರಿಸಿದ ಬೆಳಗಾವಿಯ ತನಿಷ್ಕಾ ಕಪಿಲ್ ಕಾಲಭೈರವ್ ಅವರು ವಿನಯಾ ಕೋಟ್ಯಾನ್‌ ಸ್ಮರಣಾರ್ಥ ರಾಜ್ಯ ರ‍್ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಸೋಮವಾರ 15 ಮತ್ತು 17 ವರ್ಷದೊಳಗಿನವರ ವಿಭಾಗಗಳ ಫೈನಲ್‌ನಲ್ಲಿ ನೇರ ಸೆಟ್‌ಗಳ ಗೆಲುವಿನೊಡನೆ ಪ್ರಶಸ್ತಿ ಗೆದ್ದು ಗಮನಸೆಳೆದರು. 19 ವರ್ಷದೊಳಗಿನವರ ವಿಭಾಗದಲ್ಲಿ ರನ್ನರ್ ಅಪ್‌ ಕೂಡ ಆದರು.

ತಿಳಕವಾಡಿ ಕ್ಲಬ್‌ನಲ್ಲಿ ನಡೆಯುತ್ತಿರುವ ಟೂರ್ನಿಯ 17 ವರ್ಷದೊಳಗಿನವರ ಫೈನಲ್‌ನಲ್ಲಿ  ತನಿಷ್ಕಾ ಫೈನಲ್‌ನಲ್ಲಿ 11–5, 11–4, 15–13ರಲ್ಲಿ ನೇರ ಸೆಟ್‌ಗಳಿಂದ ಶಿವಾನಿ ಮಹೇಂದ್ರನ್ ವಿರುದ್ಧ ಜಯಗಳಿಸಿದರು. 

ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ 11–6, 11–3, 11–7 ರಿಂದ ರಾಶಿ ರಾವ್‌ ವಿರುದ್ಧ, ಶಿವಾನಿ 5–11, 11–7, 11–6, 12–10 ರಿಂದ ಕೈರಾ ಬಾಳಿಗಾ ವಿರುದ್ಧ ಗೆಲುವು ಪಡೆದಿದ್ದರು.

ADVERTISEMENT

15 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ತನಿಷ್ಕಾ 11–5, 11–7, 11–6 ರಿಂದ ಕೃಷ್ಣಾ ಕರ್ಕೇರ ವಿರುದ್ಧ ಸುಲಭ ಗೆಲುವು ಪಡೆದರು.

ಇದಕ್ಕೆ ಮೊದಲು ಸೆಮಿಫೈನಲ್ ಪಂದ್ಯಗಳಲ್ಲಿ ಕೃಷ್ಣಾ 11–9, 7–11, 11–5, 11–7 ರಿಂದ ಮಿಹಿಕಾ ಉಡುಪ ಅವರನ್ನು; ತನಿಷ್ಕಾ 11–5, 11–9, 11–6 ರಿಂದ ಸಾಕ್ಷ್ಯಾ ಸಂತೋಷ್ ಅವರನ್ನು ಸೋಲಿಸಿದ್ದರು.

19 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ರಾಶಿ ರಾವ್‌ ಪಾಲಾಯಿತು. ಅವರು ಫೈನಲ್‌ನಲ್ಲಿ ತನಿಷ್ಕಾ ಅವರನ್ನು 6–11, 15–13, 11–9, 11–3, 11–8 ರಿಂದ ಪರಾಭವಗೊಳಿಸಿದರು. ಸೆಮಿಫೈನಲ್‌ ಪಂದ್ಯಗಳಲ್ಲಿ ತನಿಷ್ಕಾ 11–5, 11–9, 8–11, 11–8 ರಿಂದ ಕೈರಾ ವಿರುದ್ಧ, ರಾಶಿ 11–8, 11–7, 15–13 ರಿಂದ ಸುಮೇಧಾ ಭಟ್‌ ವಿರುದ್ಧ ಜಯ ಪಡೆದಿದ್ದರು.

17 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್‌ನಲ್ಲಿ ಗೌರವ್‌ 11–5, 11–8, 9–11, 11–9 ರಿಂದ ಶುಭಂ ತ್ರಿವೇದಿ ವಿರುದ್ಧ ಗೆಲುವು ಪಡೆದರು.

ಸೆಮಿಫೈನಲ್‌ನಲ್ಲಿ ಶುಭಂ 11–9, 11–6, 11–9 ರಿಂದ ಆರ್ಣವ್‌ ಅವರನ್ನು, ಗೌರವ್‌ 10–12, 11–5, 11–9, 11–6 ರಿಂದ ಸಿದ್ಧಾರ್ಥ ಧಾರೀವಾಲ್ ಅವರರನ್ನು ಮಣಿಸಿದ್ದರು.

ರೇಯಾನ್ಶ್‌ ಚಾಂಪಿಯನ್:

15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ರೇಯಾನ್ಶ್‌ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ 11–9, 11–8, 11–6 ರಿಂದ ಅಮನ್ ಜಾರ್ಜ್ ಥಾಮಸ್‌ ಅವರನ್ನು ಸೋಲಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ರೇಯಾನ್ಶ್‌ 11–9, 11–8, 11–7 ರಿಂದ ಪೃಥ್ವಿ ವಿವೇಕ್‌ ಮೆನನ್‌ ಅವರನ್ನು, ಅಮನ್‌ ಜಾರ್ಜ್ 11–6, 5–11, 11–5, 5–11, 11–8 ರಿಂದಶ್ರೀರಾಮ್‌ ಕಿರಣ್ ಅವರನ್ನು ಸೋಲಿಸಿದರು.

ನಾನ್‌ ಮೆಡಲಿಸ್ಟ್‌ ಸಿಂಗಲ್ಸ್ ಫೈನಲ್‌ನಲ್ಲಿ ಆದ್ಯೋತ್‌ ಯು ಅವರು 11–9, 11–3, 11–6 ರಿಂದ ಅಮನ್‌ ಜಾರ್ಜ್ ಥಾಮಸ್‌ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.