ADVERTISEMENT

ತನಿಖೆಗೆ ಅಸಹಕಾರ: ಟೆನಿಸ್‌ ಅಂಪೈರ್ ಅಮಾನತು

ಏಜೆನ್ಸೀಸ್
Published 20 ಜೂನ್ 2020, 6:12 IST
Last Updated 20 ಜೂನ್ 2020, 6:12 IST
   

ಲಂಡನ್‌: ಪಂದ್ಯದ ಸ್ಕೋರ್‌ ತಿರುಚುವಂತೆ ಅಪರಿಚಿತ ವ್ಯಕ್ತಿಗಳುತಮಗೆ ಆಮಿಷ ಒಡ್ಡಿದ್ದರ ಕುರಿತು ಮಾಹಿತಿ ನೀಡದ ಹಾಗೂ ತನಿಖೆಗೆ ಅಸಹಕಾರ ತೋರಿದ ಕಾರಣ ಟೆನಿಸ್‌ ಅಂಪೈರ್‌ ಅರ್ಮಾಂಡೊ ಬೆಲಾರ್ಡಿ ಗೊಂಜಾಲೆಜ್‌ ಅವರನ್ನು ಅಮಾನತು ಮಾಡಲಾಗಿದೆ.

ಅವರು ಇನ್ನು ಎರಡೂವರೆ ವರ್ಷ ಟೆನಿಸ್‌ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದೆಂದು ಟೆನಿಸ್‌ ಇಂಟಿಗ್ರಿಟಿ ಯೂನಿಟ್ (ಟಿಐಯು)‌ ಶುಕ್ರವಾರ ತಿಳಿಸಿದೆ.

ವೆನಿಜುವೆಲಾದ 40 ವರ್ಷ ವಯಸ್ಸಿನ ಅರ್ಮಾಂಡೊ, 2017 ಮತ್ತು 2018ರ ಅಮೆರಿಕ ಓಪನ್‌ ಹಾಗೂ 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ಆಯೋಜನೆಯಾಗಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ‘ಚೇರ್‌ ಅಂಪೈರ್‌’ ಆಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

‘ತಮಗೆ ನೀಡಿರುವ ಡಿಜಿಟಲ್‌ ಡಿವೈಸ್‌ನ ಸಹಾಯದಿಂದ ಪಂದ್ಯದ ಸ್ಕೋರ್‌ ತಿರುಚುವಂತೆ2018ರಲ್ಲಿ ಬೆಲಾರ್ಡಿ ಅವರನ್ನು ಅಪರಿಚಿತ ವ್ಯಕ್ತಿಗಳು ಎರಡು ಬಾರಿ ಸಂಪರ್ಕಿಸಿದ್ದರು. ಅದಕ್ಕೆ ಬೆಲಾರ್ಡಿ ಒಪ್ಪಿರಲಿಲ್ಲ. ಆದರೆ ಆ ವ್ಯಕ್ತಿಗಳು ತಮ್ಮನ್ನು ಭ್ರಷ್ಟಾಚಾರಕ್ಕೆ ಪ್ರೇರೇಪಿಸಿದ್ದರ ಕುರಿತ ಮಾಹಿತಿಯನ್ನು ಅವರು ನಮಗೆ ನೀಡಿರಲಿಲ್ಲ. ಇದು ಅಕ್ಷಮ್ಯ ಅಪರಾಧ. ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸಿರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಜೊತೆಗೆ ₹3.81 ಲಕ್ಷ ದಂಡವನ್ನೂ ವಿಧಿಸಲಾಗಿದೆ’ ಎಂದು ಟಿಐಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.