ADVERTISEMENT

ವಿಂಬಲ್ಡನ್‌ ಟೆನಿಸ್‌: ಜೊಕೊವಿಚ್– ಕಿರ್ಗಿಯೊಸ್‌ ಪೈಪೋಟಿ ಇಂದು

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 2:39 IST
Last Updated 10 ಜುಲೈ 2022, 2:39 IST
ನೊವಾಕ್‌ ಜೊಕೊವಿಚ್
ನೊವಾಕ್‌ ಜೊಕೊವಿಚ್   

ವಿಂಬಲ್ಡನ್‌, ಲಂಡನ್: ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಭಾನುವಾರ ನಡೆಯಲಿದ್ದು, ಸರ್ಬಿಯದ ನೊವಾಕ್‌ ಜೊಕೊವಿಚ್ ಮತ್ತು ಆಸ್ಟ್ರೇಲಿಯಾದ ನಿಕ್‌ ಕಿರ್ಗೊಯೊಸ್‌ ಪೈಪೋಟಿ ನಡೆಸುವರು.

35 ವರ್ಷದ ಜೊಕೊವಿಚ್,ಆಲ್‌ಇಂಗ್ಲೆಂಡ್‌ಕ್ಲಬ್‌ನಲ್ಲಿಏಳನೇಹಾಗೂ ವೃತ್ತಿಜೀವನದ 21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರೆ, ಕಿರ್ಗಿಯೊಸ್ ಚೊಚ್ಚಲ ಟ್ರೋಫಿಯ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ.

ಕಿರ್ಗಿಯೊಸ್‌ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಜತೆಯಲ್ಲಿ ವಿವಾದಗಳಿಂದಲೂ ಸುದ್ದಿಯಾಗಿದ್ದು, ‘ಶೋಮ್ಯಾನ್‌’ ಎಂಬ ಹೆಸರು ಪಡೆದುಕೊಂಡಿದ್ದಾರೆ. ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿ ಎರಡು ಸಲ ದಂಡವನ್ನೂ ತೆತ್ತಿದ್ದಾರೆ. ಇಲ್ಲಿ ಕಿರೀಟ ಮುಡಿಗೇರಿಸಿಕೊಂಡು ಟೀಕಾಕಾರರ ಬಾಯಿ ಮುಚ್ಚಿಸುವ ಲೆಕ್ಕಾಚಾರ ಅವರದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.