ADVERTISEMENT

ರೋಹನ್ ಬೋಪಣ್ಣ 'ಭಾರತದ ಸೂಪರ್ ಸ್ಟಾರ್' - ವಿಂಬಲ್ಡನ್ ಕನ್ನಡದಲ್ಲೇ ಪೋಸ್ಟ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2023, 11:02 IST
Last Updated 11 ಜುಲೈ 2023, 11:02 IST
ಕನ್ನಡದಲ್ಲಿ ವಿಂಬಲ್ಡನ್ ಪೋಸ್ಟ್
ಕನ್ನಡದಲ್ಲಿ ವಿಂಬಲ್ಡನ್ ಪೋಸ್ಟ್   (ಚಿತ್ರ ಕೃಪೆ: Twitter/@Wimbledon)

ಲಂಡನ್: ಭಾರತೀಯ ಟೆನಿಸ್ ರಂಗದ ಡಬಲ್ಸ್ ತಾರೆ ರೋಹನ್ ಬೋಪಣ್ಣ ಅವರನ್ನು ವಿಂಬಲ್ಡನ್ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದೆ.

ವಿಂಬಲ್ಡನ್ ಸಾಮಾಜಿಕ ಮಾಧ್ಯಮಗಳಲ್ಲಿ 'ಭಾರತದ ಸೂಪರ್ ಸ್ಟಾರ್' ಎಂದು ರೋಹನ್ ಬೋಪಣ್ಣ ಅವರನ್ನು ಕೊಂಡಾಡಿದೆ.

ಇದು ಕನ್ನಡದ ಅಭಿಮಾನಿಗಳ ಖುಷಿಗೆ ಕಾರಣವಾಗಿದ್ದು, ಬೆಂಗಳೂರು ಎಫ್‌ಸಿ ಕೂಡ, ಬೋಪಣ್ಣ ಅವರನ್ನು 'ನಮ್ಮ ಹೆಮ್ಮೆ' ಎಂದು ಪ್ರತಿಕ್ರಿಯಿಸಿದೆ.

ADVERTISEMENT

ಅಂದ ಹಾಗೆ ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ 7–5, 6–3 ರಲ್ಲಿ ಯೊಹಾನಸ್‌ ಮಂಡೇ–ಜೇಕಬ್ ಫೆರ್ನೆಲಿ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.