ADVERTISEMENT

ಅಮೆರಿಕ ಓ‍ಪನ್‌ನಲ್ಲಿ ಜೊಕೊವಿಚ್ ಕಣಕ್ಕೆ

ರಾಯಿಟರ್ಸ್
Published 13 ಆಗಸ್ಟ್ 2020, 22:53 IST
Last Updated 13 ಆಗಸ್ಟ್ 2020, 22:53 IST
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್    

ಬೆಲ್‌ಗ್ರೇಡ್: ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕೆ ಇಳಿಯುವುದಾಗಿ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ಗುರುವಾರ ಘೋಷಿಸಿದ್ದಾರೆ. ಟೂರ್ನಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 13ರ ವರೆಗೆ ನಡೆಯಲಿದೆ.

ಒಟ್ಟು 17 ಗ್ರ್ಯಾನ್‌ ಸ್ಲ್ಯಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿರುವಸರ್ಬಿಯಾದ ಜೊಕೊವಿಚ್ ಅವರ ಈ ನಿರ್ಧಾರವು ಆಯೋಜಕರಲ್ಲಿ ಹುರುಪು ತುಂಬಿದೆ. ಯಾಕೆಂದರೆ ಪ್ರಮುಖ ಟೆನಿಸ್ ಪಟುಗಳಾದ ರಫೇಲ್ ನಡಾಲ್, ಸ್ಟ್ಯಾನ್ ವಾವ್ರಿಂಕಾ ಮತ್ತಿತರರು ಕೋವಿಡ್‌–19 ಭೀತಿಯಿಂದಾಗಿ ಟೂರ್ನಿಯಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಅಮೆರಿಕ ಓಪನ್‌ನಲ್ಲಿ ಪಾಲ್ಗೊಳ್ಳುವುದು ಅಸಾಧ್ಯ ಎಂದು ಜೂನ್‌ನಲ್ಲಿ ಹೇಳಿದ್ದ ಜೊಕೊವಿಚ್ ಈಗ ನಿರ್ಧಾರ ಬದಲಿಸಿರುವುದು ಟೆನಿಸ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಟೂರ್ನಿಗೆ ಸಜ್ಜಾಗುವುದು ಸುಲಭವಾಗಿರಲಿಲ್ಲ. ಆದರೆ ಕೊನೆಯಲ್ಲಿ ಈ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿದ್ದು ಖುಷಿ ತಂದಿದೆ‘ ಎಂದು ಜೊಕೊವಿಚ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.