ADVERTISEMENT

1987: ಉಪಖಂಡದಲ್ಲಿ ವಿಶ್ವಕಪ್ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 26 ಮೇ 2019, 3:00 IST
Last Updated 26 ಮೇ 2019, 3:00 IST
   

ವಿಶ್ವಕಪ್ ಕ್ರಿಕೆಟ್ ಟೂರ್ನಿಯು ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್‌ನಿಂದ ಹೊರಗೆ ಕಾಲಿಟ್ಟಿದ್ದು 1987ರಲ್ಲಿ. ಮೊದಲ ಮೂರು ವಿಶ್ವಕಪ್‌ಗಳು ಕ್ರಿಕೆಟ್‌ ಜನಕರ ನಾಡಿನಲ್ಲಿ ನಡೆದಿತ್ತು. ನಾಲ್ಕನೇ ಟೂರ್ನಿಯ ಆತಿಥ್ಯವು ಭಾರತದ ಮಡಿಲಿಗೆ ಬಿದ್ದಿತ್ತು. ನೆರೆರಾಷ್ಟ್ರ ಪಾಕಿಸ್ತಾನದೊಂದಿಗೆ ಜಂಟಿ ಆತಿಥ್ಯ ವಹಿಸಿತು.

1983ರಲ್ಲಿ ವಿಶ್ವಕಪ್ ಗೆದ್ದು ಮೆರೆದಿದ್ದ ಭಾರತಕ್ಕೆ ತನ್ನ ತವರಿನಲ್ಲಿಯೇ ಆಡುವ ಸುರ್ವಣಾವಕಾಶ ಒದಗಿಬಂದಿತ್ತು. ಈ ದೇಶದಲ್ಲಿ ಕ್ರಿಕೆಟ್‌ ಧರ್ಮವಾಗಿ ಬೆಳೆಯಲು ಕಾರಣವಾದ ಪ್ರಮುಖ ಘಟ್ಟವೂ ಅದಾಯಿತು. ಈ ಟೂರ್ನಿ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು.

l1987ರ ಅಕ್ಟೋಬರ್‌ 8ರಿಂದ ಒಂದು ತಿಂಗಳು ಟೂರ್ನಿಯು ನಡೆಯಿತು.

ADVERTISEMENT

*ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಜಿಂಬಾಬ್ವೆ, ಪಾಕಿಸ್ತಾನ, ಇಂಗ್ಲೆಂಡ್‌, ವೆಸ್ಟ್‌ ಇಂಡೀಸ್‌ ಮತ್ತು ಶ್ರೀಲಂಕಾ ತಂಡಗಳು ಪಾಲ್ಗೊಂಡಿದ್ದವು.

* ಭಾರತದ 14 ಮತ್ತು ಪಾಕಿಸ್ತಾನದ ಏಳು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದಿದ್ದವು.

* ಓವರ್‌ಗಳ ಮಾದರಿಯಲ್ಲಿಯೂ ಮೊದಲ ಬಾರಿಗೆ ಬದಲಾವಣೆ ತರಲಾಯಿತು. ಹಿಂದಿನ ವಿಶ್ವಕಪ್‌ ಟೂರ್ನಿಗಳು 60–60 ಓವರ್‌ಗಳದ್ದಾಗಿತ್ತು. ಆದರೆ ಈ ಬಾರಿ 50–50 ಓವರ್‌ಗಳ ಟೂರ್ನಿ ನಡೆಸಲಾಯಿತು. ಅಂದಿನಿಂದ ಇಂದಿನವರೆಗೂ ಅದೇ ಮಾದರಿ ಮುಂದುವರಿದಿದೆ.

* ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಚೊಚ್ಚಲ ಪಂದ್ಯ ನಡೆಯಿತು.

* ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಎದುರು ಒಂದು ರನ್‌ನಿಂದ ವೀರೋಚಿತ ಸೋತಿತ್ತು.

* ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 270 ರನ್‌ ಗಳಿಸಿತ್ತು. ಭಾರತ 49.5 ಓವರ್‌ಗಳಲ್ಲಿ 269 ರನ್‌ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿತ್ತು.

* ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಎದುರು ಆಡುವ ಮೂಲಕ ನವಜ್ಯೋತ್‌ ಸಿಂಗ್ ಸಿಧು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಸ್ಟ್ರೇಲಿಯಾದ ಟಾಮ್‌ ಮೂಡಿ ಅವರಿಗೂ ಇದು ಚೊಚ್ಚಲ ಏಕದಿನ ಪಂದ್ಯವಾಗಿತ್ತು.

* ಭಾರತ ತಂಡಕ್ಕೆ ಎನ್‌. ಕಪಿಲ್‌ ದೇವ್‌ ಮತ್ತು ಆಸ್ಟ್ರೇಲಿಯಾಕ್ಕೆ ಅಲನ್‌ ಬಾರ್ಡರ್‌ ನಾಯಕರಾಗಿದ್ದರು.

* ರಿಲಯನ್ಸ್‌ ಟ್ರೋಫಿ ಹೆಸರಿನಲ್ಲಿ ಟೂರ್ನಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.