
ಪಿಟಿಐ
ವಿಶ್ವಕಪ್
ಜಾರ್ಜ್‌ಟೌನ್, ಗಯಾನ: ವೆಸ್ಟ್‌ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭ ಗಯಾನದಲ್ಲಿ ನಡೆಯಲಿದೆ. ಜೂನ್ 2ರ ಸಂಜೆ 6ಕ್ಕೆ ಗಯಾನದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಖ್ಯಾತ ಗಾಯಕರು ಸಂಗೀತ ಸಂಜೆ ನಡೆಸಿಕೊಡಲಿದ್ದಾರೆ.
ಮೊದಲ ಪಂದ್ಯ ಅಮೆರಿಕ–ಕೆನಡಾ ನಡುವೆ ಬೆಳಿಗ್ಗೆ 6 ಗಂಟೆ ನಡೆಯಲಿದೆ. ಎರಡನೇ ಪಂದ್ಯ ಅದೇ ದಿನ ವೆಸ್ಟ್ ಇಂಡೀಸ್–ಪಾಪುವಾ ನ್ಯೂಗಿನಿ ನಡುವೆ ರಾತ್ರಿ 8ಕ್ಕೆ ನಡೆಯಲಿದೆ. ಹಾಗಾಗಿ ಎರಡನೇ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ 20 ತಂಡಗಳು ಭಾಗವಹಿಸಿವೆ. ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.