ADVERTISEMENT

Tokyo Olympics| ಮಹಿಳೆಯರ ಜಾವೆಲಿನ್ ಥ್ರೋ: ಅನುರಾಣಿ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 2:12 IST
Last Updated 3 ಆಗಸ್ಟ್ 2021, 2:12 IST
ಅನುರಾಣಿ
ಅನುರಾಣಿ    

ಟೋಕಿಯೊ: ಭಾರತೀಯ ಅಥ್ಲಿಟ್‌ ಅನು ರಾಣಿ ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ಸ್ಪರ್ಧೆಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ.

ಮೊದಲ ಸುತ್ತಿನಲ್ಲಿ 50.35 ಮೀಟರ್‌ ವರೆಗೆ ಜಾವೆಲಿನ್‌ ಎಸೆದ ಅವರು ಕಳಪೆ ಪ್ರದರ್ಶನ ತೋರಿದರು. ಎರಡನೇ ಬಾರಿಗೆ ಉತ್ತಮ ಪ್ರಯತ್ನ (53.19 ಮೀಟರ್‌) ಮಾಡಿದರಾದರು 12 ಸ್ಥಾನದಲ್ಲಿ ಉಳಿದರು.

ಮೂರನೇ ಬಾರಿಗೆ ಮತ್ತಷ್ಟು ದೂರಕ್ಕೆ (54.04 ಮೀಟರ್‌) ಜಾವೆಲಿನ ಎಸೆದ ಅನು 14 ಸ್ಥಾನಕ್ಕೆ ಬಂದು ನಿಲ್ಲಬೇಕಾಯಿತು. ಇದರೊಂದಿಗೆ ಫೈನಲ್‌ ತಲುಪುವ ಅನು ಕನಸು ಭಗ್ನಗೊಂಡಿತು.

ADVERTISEMENT

ಇದೇ ವರ್ಷದ ಮಾರ್ಚ್‌ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಉತ್ತರ ಪ್ರದೇಶದಅನು 63.24 ಮೀಟರ್ಸ್ ದೂರದ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.