
ಅಮೆಜಾನ್
ಸ್ಯಾನ್ ಫ್ರಾನ್ಸಿಸ್ಕೊ: ಅಮೆಜಾನ್ ಕಂಪನಿಯು 14 ಸಾವಿರದಷ್ಟು ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ.
ಸುಮಾರು 30 ಸಾವಿರದಷ್ಟು ನೌಕರರನ್ನು ಕಡಿಮೆ ಮಾಡುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಮೆಜಾನ್ ಸಂಸ್ಥೆಯು 14 ಸಾವಿರದಷ್ಟು ನೌಕರರ ಸಂಖ್ಯೆಯನ್ನು ಕಡಿತಗೊಳಿಸಿತ್ತು.
ಆದರೆ ಉದ್ಯೋಗ ಕಡಿತದ ಕುರಿತು ಸಂಸ್ಥೆಯಿಂದ ಇನ್ನಷ್ಟೇ ಅಧಿಕೃತ ಪ್ರಕಟಣೆ ಬರಬೇಕಿದೆ.
ಯಾವೆಲ್ಲ ವಿಭಾಗಕ್ಕೆ ಧಕ್ಕೆ?
ವೆಬ್ ಸರ್ವೀಸ್,
ರಿಟೇಲ್,
ಪ್ರೈಮ್ ವಿಡಿಯೊ,
ಮಾನವ ಸಂಪನ್ಮೂಲ,
ಪೀಪಲ್ ಎಕ್ಸ್‌ಪೀರಿಯನ್ಸ್, ತಂತ್ರಜ್ಞಾನ
2022ರಲ್ಲಿ ಅಮೆಜಾನ್ 27 ಸಾವಿರದಷ್ಟು ಉದ್ಯೋಗ ಕಡಿತಗೊಳಿಸಿತ್ತು. ಈಗ ಮೂರು ದಶಕಗಳಲ್ಲೇ ಬೃಹತ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.