ಕುಪರ್ಟಿನೊ: ಐಫೋನ್ ಉತ್ಪಾದಿಸುವ ಆ್ಯಪಲ್ ಕಂಪನಿಯ ವಾರ್ಷಿಕ ಕಾರ್ಯಕ್ರಮ ಮತ್ತು ಹೊಸ ಉತ್ಪನ್ನಗಳ ಬಿಡುಗಡೆ ಸಮಾರಂಭ ಇಂದು (ಸೆ. 9) ರಾತ್ರಿ ನಡೆಯಲಿದೆ.
ಬಹುನಿರೀಕ್ಷಿತ ಐಫೋನ್ 17, ಐAppಫೋನ್ 17 ಏರ್, 17 ಪ್ರೊ, 17 ಪ್ರೊ ಮ್ಯಾಕ್ಸ್ ಮತ್ತು ಆ್ಯಪಲ್ ವಾಚ್ ಸೀರಿಸ್ 11 ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಕಾರ್ಯಕ್ರಮದ ನೇರ ಪ್ರಸಾರ ಆ್ಯಪಲ್ ಟಿವಿ ಸಹಿತ, ಸಾಮಾಜಿಕ ಮಾಧ್ಯಮಗಳ ಆ್ಯಪಲ್ ಖಾತೆಗಳಲ್ಲಿ ಪ್ರಸಾರವಾಗಲಿದೆ.
ಮುಂದಿನ ತಲೆಮಾರಿನ ಆ್ಯಪಲ್ ಫೋನ್ ಹಾಗೂ ಇತರ ಗ್ಯಾಜೆಟ್‌ಗಳು ಹೇಗಿರಲಿವೆ ಎಂಬ ಚರ್ಚೆ ಈಗಾಗಲೇ ಹಲವು ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶ ಮತ್ತು ಆಪರೇಟಿಂಗ್ ಸಿಸ್ಟಂ ಐಒಎಸ್ ಹೇಗಿರಲಿದೆ. ಏನೇನು ಹೊಸ ಸೌಲಭ್ಯಗಳನ್ನು ನೀಡಲಾಗಿದೆ ಎಂಬ ಚರ್ಚೆಗಳೂ ನಡೆದಿವೆ.
ಹೊಸ ಬಗೆಯ ವಿನ್ಯಾಸ, ಕ್ಯಾಮೆರಾ ಗುಣಮಟ್ಟದಲ್ಲಿ ಇನ್ನಷ್ಟು ಸುಧಾರಣೆ, ಎಐನ ಪರಿಣಾಮಕಾರಿ ಬಳಕೆಯತ್ತ ನಿರೀಕ್ಷೆ ಹೆಚ್ಚಾಗಿದೆ. ಜತೆಗೆ ಈಗಾಗಲೇ ಐಫೋನ್ ಹೊಂದಿರುವವರು ಹೊಸ ಐಒಎಸ್ 26ರಲ್ಲಿ ಅಪ್‌ಡೇಟ್‌ಗಳ ಮಾಹಿತಿಗಾಗಿಯೂ ಕಾದಿದ್ದಾರೆ.
‘ಪ್ಲಸ್’ ಮಾದರಿಗೆ ಆ್ಯಪಲ್ ತಿಲಾಂಜಲಿ ಹಾಡಲಿದೆ. ಅತ್ಯಂತ ಸಪೂರ ಫೋನ್ ಬಿಡುಗಡೆ ಮಾಡಲಿದೆ. ಚಾರ್ಜರ್ ಪೋರ್ಟ್ ಇಲ್ಲದ ಫೋನ್ ಈಬಾರಿಯ ವಿಶೇಷ ಎಂಬಿತ್ಯಾದಿ ಚರ್ಚೆಗಳು ನಡೆದಿವೆ. ಅವೆಲ್ಲದಕ್ಕೂ ಆ್ಯಪಲ್ ಈವೆಂಟ್ ಮೂಲಕ ತೆರೆ ಬೀಳಲಿದೆ.
ಈ ಕಾರ್ಯಕ್ರಮ ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ರಾತ್ರಿ 10.30ಕ್ಕೆ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.