ಭಾರತದ ಎಲೆಕ್ಟ್ರಾನಿಕ್ ಬ್ರಾಂಡ್ Mivi ಸಂಸ್ಥೆ Mivi AI Buds ಮೂಲಕ ಜಾಗತಿಕ ತಂತ್ರಜ್ಞಾನದಲ್ಲಿ ಹೊಸ ಸಾಧನೆ ಮಾಡಿದೆ. ಭಾವನಾತ್ಮಕವಾಗಿ ಬುದ್ಧಿಮತ್ತೆಯ ಎಐ ಪ್ಲಾಟ್ಫಾರ್ಮ್ನಲ್ಲಿ ಅದ್ಭುತ ಆಡಿಯೊವನ್ನು ಮೇಳೈಸುವ ಹೊಸ ಸಾಧನ ಇದು. ಭಾರತದಲ್ಲೇ ಸಂಪೂರ್ಣ ವಿನ್ಯಾಸ ಮಾಡಲಾಗಿರುವ ಈ ಎಐ ಶ್ರವಣ ಸಾಧನವು ನಿಮಗೆ ಪರದೆರಹಿತವಾದ, ಸಹಜ ಸಂವಾದದ ಅನುಭವ ತರುತ್ತದೆ. ತಂತ್ರಜ್ಞಾನದೊಂದಿಗೆ ಸಂವಾದ ನಡೆಸುವ ಪರಿಯೇ ಬದಲಾಗುವಂತೆ ಮಾಡುತ್ತದೆ.
ಹಿಂದಿನ AI ಪ್ಲಾಟ್‌ಫಾರ್ಮ್‌ಗಳಿಗಿಂತ ಭಿನ್ನವಾಗಿ, Mivi AI ಅನ್ನು ಮಾನವ ಒಡನಾಡಿಯ ರೀತಿ ಪ್ರತಿಕ್ರಿಯಿಸುವಂತೆ ರಚಿಸಲಾಗಿದೆ. ಮೆಮೊರಿ, ಸಂದರ್ಭಗಳ ಅರಿವು ಮತ್ತು ಪರ್ಸನಲೈಸ್ಡ್ ಇಂಟರಾಕ್ಷನ್ ಆಧಾರದ ಮೇಲೆ ತಯಾರಿಸಲಾಗಿರುವ Mivi AI ಪ್ರತಿ ಸಂಭಾಷಣೆಯಲ್ಲೂ ವಿಕಸನಗೊಳ್ಳುತ್ತದೆ. ಸಂಭಾಷಣೆಯನ್ನು ಜ್ಞಾಪಕ ಇಟ್ಟುಕೊಂಡು ಸಂದರ್ಭಕ್ಕೆ ತಕ್ಕಂತೆ ಬಳಕೆದಾರರ ಆದ್ಯತೆಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ.
ಸೆಟಿಂಗ್ಸ್ ಬದಲಾವಣೆ ಇಲ್ಲದೆ ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ, ಕನ್ನಡ, ಮಲಯಾಳಂ ಮತ್ತು ಗುಜರಾತಿ ಭಾಷೆಗಳನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುತ್ತದೆ.
Mivi AI Buds ವೈಶಿಷ್ಟ್ಯಗಳು
ವಿನ್ಯಾಸ - AI ಬಡ್ಸ್ ಹವರ್ ಗ್ಲಾಸ್ ವಿನ್ಯಾಸವನ್ನು ಹೊಂದಿರುವ ಈ ಬಡ್ಸ್, ಕಿವಿಯ ನೈಸರ್ಗಿಕ ಶಬ್ಧದ ಹರಿವಿಗೆ ಹೊಂದಿಕೆಯಾಗುವಂತೆ ಮತ್ತು ಇಡೀ ದಿನ ಸುಗಮವಾಗಿ ಬಳಕೆಗೆ ಅನುಕೂಲವಾಗುವಂತೆ ತಯಾರಿಸಲಾಗಿದೆ.
Mivi AI - ಹಾಯ್ Mivi ಎಂಬ ಸರಳ ಆರಂಭಿಕ ಪದಗಳ ಕಮಾಂಡ್‌ನಿಂದ ಸಂದರ್ಭೋಚಿತ ಸಂಭಾಷಣೆಗಳನ್ನೂ ನಡೆಸಬಹುದು.
Mivi AI ಅಪ್ಲಿಕೇಶನ್ : ಇದರ ನಿಯಂತ್ರಣ ಸಂಪೂರ್ಣ ನಿಮ್ಮ ಕೈಯಲ್ಲಿ ಇರುತ್ತದೆ. Google Play Store ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ Mivi AI ಅಪ್ಲಿಕೇಶನ್ ಮೂಲಕ ಧ್ವನಿ ಗ್ರಾಹಕೀಕರಣ ಮತ್ತು ಸಂವಹನ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ. ಪರ್ಸನಲೈಸ್ಡ್ ಎಐ ಅಸಿಸ್ಟೆಂಟ್ ಅನ್ನು ನಿಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.