ADVERTISEMENT

ಆ್ಯಂಡ್ರಾಯ್ಡ್ ಬಳಕೆದಾರರಿಗೆ ‘ಎಮರ್ಜೆನ್ಸಿ ಲೊಕೇಶನ್ ಸರ್ವಿಸ್’ ಲಭ್ಯ: ಹೀಗೆ ಬಳಸಿ

ರೋಹಿತ್‌ ಕೆವಿಎನ್‌
Published 23 ಡಿಸೆಂಬರ್ 2025, 11:12 IST
Last Updated 23 ಡಿಸೆಂಬರ್ 2025, 11:12 IST
<div class="paragraphs"><p>ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌</p></div>

ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌

   

ಚಿತ್ರ ಕೃಪೆ: ಗೂಗಲ್

ಭಾರತದ ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ತುರ್ತು ಸಂದರ್ಭದಲ್ಲಿ ಬಳಸಲು ‘ಎಮರ್ಜೆನ್ಸಿ ಲೊಕೇಶನ್‌ ಸರ್ವಿಸ್‌’ ವ್ಯವಸ್ಥೆಯನ್ನು ಗೂಗಲ್ ಕಂಪನಿಯು ಮಂಗಳವಾರ ಪರಿಚಯಿಸಿದೆ.

ADVERTISEMENT

ಅಮೆರಿಕದಲ್ಲಿ ಈ ಹಿಂದೆಯೇ ಗೂಗಲ್‌ ಮತ್ತು ಆ್ಯಪಲ್‌ 911ಎಸ್‌ಒಎಸ್‌ ಜತೆಗೆ ಎಮರ್ಜೆನ್ಸಿ ಲೊಕೇಶನ್‌ ಸರ್ವಿಸ್‌ ಅನ್ನು ಪರಿಚಯಿಸಿದೆ. ಯುರೋಪ್‌ ಮತ್ತು ಆಸ್ಟ್ರೇಲಿಯಾದಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿದೆ. 

ಆದರೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಆ್ಯಂಡ್ರಾಯ್ಡ್‌ ಬಳಕೆದಾರರು ಅಪಾಯ ಅಥವಾ ತೊಂದರೆಯಲ್ಲಿದ್ದಾಗ ‘ಎಮರ್ಜೆನ್ಸಿ ಲೊಕೇಶನ್‌ ಸರ್ವಿಸ್‌’ ಆಯ್ಕೆ ಮೂಲಕ 112ಗೆ ನಿಮ್ಮ ಲೊಕೇಶನ್‌ ತಲುಪುವಂತೆ ಮಾಡಬಹುದು.

112 ತುರ್ತು ಕರೆಗಳ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ನಿರ್ವಹಿಸುತ್ತಾರೆ.

ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ಈ ವ್ಯವಸ್ಥೆ ಲಭ್ಯವಿದೆ. ಇದನ್ನು ಪರ್ಟ್ ಟೆಲಿಕಾಂ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಪರ್ಟ್‌ಸೋಲ್) ನಿರ್ವಹಿಸಲಿದೆ.

ಆ್ಯಂಡ್ರಾಯ್ಡ್‌ ಬಳಕೆದಾರರು, ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿದಾಗ ಪೊಲೀಸ್, ಆಸ್ಪತ್ರೆ ಮತ್ತು ಅಗ್ನಿಶಾಮಕದಳ ಕೇಂದ್ರಗಳಿಗೆ ಲೊಕೇಶನ್‌ ತಲುಪುತ್ತದೆ.

ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌, ಮಷಿನ್‌ ಲರ್ನಿಂಗ್ ಆಧಾರಿತವಾಗಿದ್ದು, ಇದು ಜಿಪಿಎಸ್‌, ವೈಫೈ ಮತ್ತು ಮೊಬೈಲ್ ನೆಟ್‌ವರ್ಕ್‌ ಮಾಹಿತಿ ಜತೆಗೆ ಮೊಬೈಲ್‌ನಲ್ಲಿ ಬಳಸುವ ಭಾಷೆಯ ಮೂಲಕ ಮಾಹಿತಿ ನೀಡಿ ಮೊಬೈಲ್‌ ಇರುವ 50 ಮೀಟರ್‌ ದೂರದಲ್ಲಿ ನಿಖರ ಜಾಗವನ್ನು ಪತ್ತೆ ಮಾಡಿ ತೋರಿಸುತ್ತದೆ.

ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌ಗೆ ಯಾವುದೇ ಹಣ ಪಾವತಿಸಬೇಕಿಲ್ಲ. ಮೊಬೈಲ್‌ನಲ್ಲಿ ಯಾವಾಗ 112 ಸಂಖ್ಯೆ ಅಥವಾ ತುರ್ತು ಸಂಖ್ಯೆ ಡಯಲ್‌ ಆಗುವುದೋ ಆಗ ಮಾತ್ರ ಸಕ್ರಿಯವಾಗುತ್ತದೆ. ಇದಕ್ಕೆ ಪ್ರತ್ಯೇಕವಾಗಿ ಆ್ಯಪ್‌ ಅಥವಾ ಹಾರ್ಡ್‌ವೇರ್ ಅಗತ್ಯವಿಲ್ಲ.

ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌

ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌ ಸಕ್ರಿಯಗೊಳಿಸುವುದು ಹೇಗೆ?

ಸೆಟ್ಟಿಂಗ್ಸ್‌–> ಸೇಫ್ಟಿ & ಎಮರ್ಜೆನ್ಸಿ–> ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌ ಆಯ್ಕೆಯ ಎದುರು ಸಕ್ರಿಯಗೊಳಿಸಿ.

ಮುಂದಿನ ದಿನಗಳಲ್ಲಿ ಸರ್ಕಾರದ ನೆರವಿನೊಂದಿಗೆ ಇತರ ರಾಜ್ಯಗಳಲ್ಲೂ ಎಮರ್ಜೆನ್ಸಿ ಲೊಕೇಶನ್ ಸರ್ವಿಸ್‌ ವ್ಯವಸ್ಥೆಯನ್ನು ಜಾರಿಗೊಳಿಸಲು ಗೂಗಲ್ ಯೋಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.