ADVERTISEMENT

Huawei Band 10 ಭಾರತದಲ್ಲಿ ಬಿಡುಗಡೆ; ಬೆಲೆ ವೈಶಿಷ್ಟ್ಯಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2025, 9:57 IST
Last Updated 6 ಜೂನ್ 2025, 9:57 IST
<div class="paragraphs"><p>ಹುವಾವೆ ಬ್ಯಾಂಡ್ 10</p></div>

ಹುವಾವೆ ಬ್ಯಾಂಡ್ 10

   

ಬೆಂಗಳೂರು: ಜಾಗತಿಕವಾಗಿ ತಂತ್ರಜ್ಞಾನ ತಯಾರಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಹುವಾವೆ, ಭಾರತದಲ್ಲಿ ಅತಿ ನೂತನ 'ಬ್ಯಾಂಡ್ 10' ಸ್ಮಾರ್ಟ್‌‍ವಾಚ್ ಅನ್ನು ಪರಿಚಯಿಸಿದೆ. ಇದು ಹುವಾವೆ ಬ್ಯಾಂಡ್ 9ರ ಉತ್ತರಾಧಿಕಾರಿ ಎನಿಸಲಿದೆ.

ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರಿಗೆ ಇದು ಉತ್ತಮ ಆಯ್ಕೆಯಾಗಿರಲಿದೆ. ಕಟ್ಟಿಂಗ್ ಎಡ್ಜ್ ವಿನ್ಯಾಸವು ದೈನಂದಿನ ಬಳಕೆಗೆ ಯೋಗ್ಯವೆನಿಸಿದೆ.

ADVERTISEMENT

ಬಿಡುಗಡೆಯ ಭಾಗವಾಗಿ ಜೂನ್ 10ರವರೆಗೆ ಅಮೇಜಾನ್‌ನಲ್ಲಿ ವಿಶೇಷ ಆಫರ್ ಲಭ್ಯವಿರಲಿದೆ. ಬ್ಯಾಂಡ್ 10 (Polymer Case) ಬೆಲೆ ₹3,699 ಹಾಗೂ ಬ್ಯಾಂಡ್ 10 (Premium aluminium Alloy Case) ಬೆಲೆ ₹4,199 ಆಗಿರಲಿದೆ.

ಹುವಾವೆ ಬ್ಯಾಂಡ್ 10, ಎಐ ಬೆಂಬಲಿತ ಫಿಟ್ನೆಸ್ ಹಾಗೂ ಈಜು ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಒಳಗೊಂಡಿರಲಿದೆ. 100 ವರ್ಕ್ ಔಟ್ ಮೋಡ್ ಜೂತೆಗೆ ಓಟ, ಸೈಕ್ಲಿಂಗ್, ಯೋಗ ಸೇರಿದಂತೆ ವೆಲ್ನೆಸ್ ಚಟುವಟಿಕೆಗಳಲ್ಲಿ ಉತ್ತಮ ಬೆಂಬಲ ನೀಡಲಿದೆ. 5 ಎಟಿಎಂ ವಾಟರ್ ರೆಸಿಸ್ಟನ್ ಫೀಚರ್ ಸಹ ಒಳಗೊಂಡಿರುತ್ತದೆ.

ದೀರ್ಘ ಬಾಳ್ವಿಕೆಯ ಬ್ಯಾಟರಿ, ಆಕರ್ಷಕ ಬಣ್ಣಗಳಿಂದ ಕೂಡಿರಲಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ಡಿವೈಸ್‌ಗಳಿಗೆ ಹೊಂದಿಸಬಹುದಾಗಿದೆ.

ಹುವಾವೆ ಬ್ಯಾಂಡ್ 10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.