ADVERTISEMENT

ಹುವಾವೆಯ Huawei Band 9, FreeBuds SE2 ಬಿಡುಗಡೆ

Huawei Band 9 ಒಂದು ಸ್ಮಾರ್ಟ್ ವಾಚ್ ಆಗಿದ್ದು, ಹೊಸ ಆವಿಷ್ಕಾರಗಳನ್ನು ಒಳಗೊಂಡಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2025, 14:02 IST
Last Updated 15 ಜನವರಿ 2025, 14:02 IST
<div class="paragraphs"><p>Huawei Band 9</p></div>

Huawei Band 9

   

ಬೆಂಗಳೂರು: ಕೈಗೆಟುಕುವ ಬೆಲೆ ಹಾಗೂ ಗ್ರಾಹಕ ಸ್ನೇಹಿ ಎಲೆಕ್ಟ್ರಾನಿಕ್ ಸರಕುಗಳನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿರುವ ಹುವಾವೆ (Huawei) ತನ್ನ ಇತ್ತೀಚಿನ Huawei Band 9 ಮತ್ತು FreeBuds SE2 ಎಂಬ ಎರಡು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.

Huawei Band 9 ಒಂದು ಸ್ಮಾರ್ಟ್ ವಾಚ್ ಆಗಿದ್ದು, ಹೊಸ ಆವಿಷ್ಕಾರಗಳನ್ನು ಒಳಗೊಂಡಿದೆ.

ADVERTISEMENT

ಆಕರ್ಷಕ ನೋಟದಲ್ಲಿರುವ ಈ ವಾಚ್ 14 ಗ್ರಾಂ ತೂಕವಿದ್ದು 14 ದಿನಗಳ ಬ್ಯಾಟರಿ ಬಾಳಕೆ ಹೊಂದಿದೆ. ಬೆಲೆ ₹4,499 ಇದ್ದು, ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.

ಸಂಗೀತಾಸಕ್ತರಿಗೆ ಹುವಾವೆ, ತನ್ನ ಲೇಟೆಸ್ಟ್ FreeBuds SE2 ಅನ್ನು ಬಿಡುಗಡೆ ಮಾಡಿದೆ. ಇದೊಂದು ವಯರ್‌ಲೆಸ್ ಸಾಧನವಾಗಿದ್ದು ಕನಿಷ್ಠ 40 ಗಂಟೆ ಪ್ಲೇಬ್ಯಾಕ್ ಬ್ಯಾಟರಿ ಬಾಳಿಕೆ ಹೊಂದಿದೆ. ಇದರ ಬೆಲೆ ₹2,999 ಆಗಿದ್ದು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ ಜನವರಿ 16ರಿಂದ ಲಭ್ಯವಿದೆ.

ಈ ಕುರಿತು ಕಂಪನಿ ಪ್ರಕಟಣೆ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

FreeBuds SE2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.