ಹುವಾಯಿ ಫ್ರೀಕ್ಲಿಪ್ಸ್
ಮುಂಬೈ: ಇಯರ್ ಬಡ್‌ನಲ್ಲಿ ಓಪನ್ ಇಯರ್ ತಂತ್ರಜ್ಞಾನ ಇತ್ತೀಚಿನ ಜಾಗತಿಕ ಬೇಡಿಕೆ. ಈ ತಂತ್ರಜ್ಞಾನ ಆಧಾರಿತ ಸಾಧನ ಹುವಾಯಿ ಫ್ರೀಕ್ಲಿಪ್ಸ್ ಅನ್ನು ಇತ್ತೀಚೆಗೆ ಕಂಪನಿಯು ಭಾರತದಲ್ಲಿ ಬಿಡುಗಡೆ ಮಾಡಿದೆ.
ಸರೌಂಡ್ ಸೌಂಡ್ ಅನ್ನು ಅನುಭವಸಲಿಚ್ಛಿಸುವ ಸಂಗೀತ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಿರುವ ಹುವಾಯಿ, ಹೊರಗಿನ ಟ್ರಾಫಿಕ್ ಶಬ್ಧವಿರಲಿ, ಕಚೇರಿ ಬಳಕೆಗಾಗಿರಲಿ, ಯಾವುದೇ ಪರಿಸರ, ವರ್ಕ್‌ಔಟ್ ಅಥವಾ ಪ್ರಯಾಣದ ಸಂದರ್ಭದಲ್ಲೂ ಒಂದೇ ರೀತಿಯಾಗಿ ಸಂಗೀತ ಕೇಳಬಹುದಾಗಿದೆ. ಇದು 10.8 ಮಿ.ಮೀ. ಡುಯಲ್ ಮ್ಯಾಗ್ನೆಟ್ ಸೂಕ್ಷ್ಮ ಡ್ರೈವರ್‌ಗಳನ್ನು ಹೊಂದಿದೆ.
8 ಗಂಟೆಗಳ ನಿರಂತರ ಬಳಕೆ, ಒಂದೇ ಚಾರ್ಜ್‌ನಲ್ಲಿ 36 ಗಂಟೆಗಳ ಬಳಕೆಗೆ ಯೋಗ್ಯವಾಗುವ ಕೇಸ್ ನೀಡಲಾಗಿದೆ. ಹತ್ತು ನಿಮಿಷಗಳ ಚಾರ್ಜ್‌ನಲ್ಲಿ ಮೂರು ಗಂಟೆ ಬಳಕೆ ಮಾಡಬಹುದು ಎಂದು ಕಂಪನಿ ಹೇಳಿದೆ.
ಇದನ್ನು ಅಮೆಜಾನ್ ಮತ್ತು rtcindia.netನಲ್ಲಿ ಗ್ರಾಹಕರು ಖರೀದಿಸಬಹುದಾಗಿದ್ದು, ಇದರ ಬೆಲೆ ₹14,999ಕ್ಕೆ ಲಭ್ಯ ಎಂದು ಕಂಪನಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.