ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್‌ ಫೋಲ್ಡ್‌–4, ಫ್ಲಿಪ್4 ಸ್ಮಾರ್ಟ್‌ ಫೋನ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2022, 9:35 IST
Last Updated 12 ಆಗಸ್ಟ್ 2022, 9:35 IST
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್-4 ಹಾಗೂ ಫ್ಲಿಪ್ 4 (ಒಳಚಿತ್ರ)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್-4 ಹಾಗೂ ಫ್ಲಿಪ್ 4 (ಒಳಚಿತ್ರ)   

ಸೋಲ್‌: ಸ್ಯಾಮ್‌ಸಂಗ್‌ ಕಂಪನಿಯು ಗ್ಯಾಲಕ್ಸಿ ಸರಣಿಯ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್‌ ಫ್ಲಿಪ್‌–4 (Samsung Galaxy Z Flip 4) ಮತ್ತುಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್‌ ಫೋಲ್ಡ್‌–4 (Samsung Galaxy Z Fold 4) ಫೋನ್‌ಗಳು ಬಿಡುಗಡೆಯಾಗಿವೆ. ಇವುಗಳಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಫೋಲ್ಡಬಲ್‌ ಸರಣಿಯಲ್ಲೇ ಅತ್ಯಂತ ಶಕ್ತಿಶಾಲಿಯಾಗಿರುವ ಫೋನ್ ಆಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಲ್ಲಿನ ಸೋಲ್‌ನಲ್ಲಿ ನಡೆದ ಗ್ಯಾಲಕ್ಸಿ ಪೋನ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಪನಿಯ ಮುಖ್ಯಸ್ಥ ಟಿ.ಎಂ ರೋಹ್‌ ಫೋನ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾತ್ಮಕವಾಗಿ ಈ ಡಿವೈಸ್‌ಗಳನ್ನು ರೂಪಿಸಲಾಗಿದೆ. ಈ ಫೋನ್‌ಗಳು ಗ್ರಾಹಕರಿಗೆ ಇಷ್ಟವಾಗಲಿವೆಟಿ.ಎಂ ರೋಹ್‌ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಝಡ್‌ ಫೋಲ್ಡ್‌–4

ಈ ಫೋನ್‌ ಡ್ಯುಯಲ್‌ ಸಿಮ್‌ ಹೊಂದಿದ್ದು ಆ್ಯಂಡ್ರಾಯ್ಡ್‌–12 ಆಧಾರಿತ ಫೋನ್‌ ಆಗಿದೆ.One UI 4.1.1 ನಲ್ಲಿ ಕಾರ್ಯನಿರ್ವಹಿಸುವ ಈ ಪೋನ್‌7.6-ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೆ ಹೊಂದಿದೆ.7.6 ಇಂಚು ಹಾಗೂ 6.2 ಇಂಚಿನಲ್ಲಿ ಈ ಫೋನ್‌ ಲಭ್ಯವಿದೆ.

ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8+ Gen 1 SoC ಅನ್ನು ಹೊಂದಿದ್ದು, ಇದನ್ನು 12 ಜಿಬಿ ರ‍್ಯಾಮ್ ಮತ್ತು 1ಟಿಬಿ ವರೆಗಿನ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.

256 ಜಿಬಿಯ ಸ್ಟೋರೇಜ್ ಇರುವ ಈ ಫೋನಿನಲ್ಲಿ 50 ಎಂಪಿ ಕ್ಯಾಮೆರಾ ಇರಲಿದೆ.4400 ಎಂಎಎಚ್‌ ಬ್ಯಾಟರಿ ಸಾಮರ್ಥ್ಯದ ಈ ಫೋನ್‌ ಬೆಲೆ ಭಾರತದಲ್ಲಿ ₹ 1,42,700ಬೆಲೆ ಇರಲಿದೆ ಎಂದು ಕಂಪನಿ ಹೇಳಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫ್ಲಿಪ್‌–4

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫ್ಲಿಪ್‌ ಫೋನ್‌ ಸಹಗ್ಯಾಲಕ್ಸಿ ಝಡ್‌ ಫೋಲ್ಡ್‌ ಮಾದರಿ ಫೋನಿನ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನ್‌ 5ಜಿಗೆ ಸಪೋರ್ಟ್‌ ಮಾಡಲಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. 12ಜಿಬಿ ರ‍್ಯಾಮ್, 256 ಜಿಬಿ ಸ್ಟೋರೇಜ್ ಹೊಂದಿರಲಿದೆ.

50 ಎಂಪಿ ಕ್ಯಾಮೆರಾ ಹಾಗೂ 5000 ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಈ ಎರಡು ಫೋನ್‌ಗಳನ್ನುSamsung.com (ವೆಬ್‌ಸೈಟ್‌) ಮೂಲಕ ಹಾಗೂ ಇತರೆ ಇ–ಕಾಮರ್ಸ್‌ ತಾಣಗಳ ಮೂಲಕ ಗ್ರಾಹಕರು ಖರೀದಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.