ADVERTISEMENT

Lava Agni 5G ಸ್ಮಾರ್ಟ್‌ಫೋನ್‌ ಮೇಲೆ ಬಳಕೆದಾರರ ಹೆಸರು: ಹೊಸ ವೈಶಿಷ್ಟ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2022, 11:29 IST
Last Updated 12 ಆಗಸ್ಟ್ 2022, 11:29 IST
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್‌
ಲಾವಾ ಅಗ್ನಿ 5ಜಿ ಸ್ಮಾರ್ಟ್‌ಫೋನ್‌   

ನವದೆಹಲಿ: 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ‘ಲಾವಾ ಇಂಟರ್‌ನ್ಯಾಷನಲ್‌’ ಹೊಸದೊಂದು ವೈಶಿಷ್ಟ್ಯವನ್ನು ಬಳಕೆದಾರರಿಗೆ ಪರಿಚಯಿಸುತ್ತಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಗೊಂಡಿರುವ ‘ಲಾವಾ ಅಗ್ನಿ 5ಜಿ’ ಸ್ಮಾರ್ಟ್‌ಫೋನ್‌ಗೆ ಈ ವೈಶಿಷ್ಟ್ಯವು ಅನ್ವಯವಾಗಲಿದೆ.

ಫೋನ್‌ನ ಹಿಂಭಾಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಗ್ರಾಹಕರು ತಮ್ಮ ಹೆಸರನ್ನು ಹಾಕಿಸಿಕೊಳ್ಳಬಹುದಾಗಿದೆ.

ADVERTISEMENT

ಗ್ರಾಹಕರು ಲಾವಾ ಇ–ಸ್ಟೋರ್‌ನಿಂದ (www.lavamobiles.com) ವೈಶಿಷ್ಟ್ಯದ ಪ್ರಯೋಜನವನ್ನು ಪಡೆಯಬಹುದು.

ಲಾವಾ ಮೊಬೈಲ್ಸ್‌ ವೈಬ್‌ಸೈಟ್‌ನಲ್ಲಿ ಬಳಕೆದಾರರು ತಮ್ಮ ವಿವರಗಳನ್ನು ಸರಳವಾಗಿ ನಮೂದಿಸುವ ಮೂಲಕ ಕೂಪನ್‌ ಅನ್ನು ಪಡೆಯಬಹುದು. ಹೆಚ್ಚುವರಿ ವೆಚ್ಚವಿಲ್ಲದೆ ಕೂಪನ್‌ ಮೂಲಕ ಫೋನ್‌ ಹಿಂಬದಿಯಲ್ಲಿ ಹೆಸರು ಹಾಕಿಸಿಕೊಳ್ಳುವ ಸೌಲಭ್ಯವನ್ನು ಹೊಂದಬಹುದು.

ಈ ಕುರಿತು ಪ್ರತಿಕ್ರಿಯಿಸಿದ ಲಾವಾ ಇಂಟರ್‌ನ್ಯಾಶನಲ್‌ನ ಉತ್ಪನ್ನ ಮುಖ್ಯಸ್ಥ ತೇಜಿಂದರ್ ಸಿಂಗ್, ‘ಗ್ರಾಹಕರು ನಮ್ಮ ವ್ಯಾಪಾರ ತಂತ್ರದ ಪ್ರಮುಖ ಕೇಂದ್ರವಾಗಿದ್ದಾರೆ. ತನ್ನ ಉತ್ಪನ್ನಕ್ಕೆ ನವೀನ ವೈಶಿಷ್ಟ್ಯಗಳನ್ನು ಪರಿಚಯಿಸಲು ಲಾವಾ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಮತ್ತು ಹೆಸರು ಹಾಕಿಸುವ ವಿಶೇಷ ವೈಶಿಷ್ಟ್ಯವನ್ನು ಪರಿಚಯಿಸುವುದು ನಮ್ಮ ಕಾರ್ಯತಂತ್ರದ ಪ್ರಮುಖ ಹೆಜ್ಜೆಯಾಗಿದೆ’ ಎಂದು ತಿಳಿಸಿದ್ದಾರೆ.

‘ಅಗ್ನಿ’ ಬ್ರ್ಯಾಂಡ್‌ ಹೆಸರಿನಲ್ಲಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ ಅನ್ನು ಕಂಪನಿಯು ಭಾರತದಲ್ಲಿಯೇ ಅಭಿವೃದ್ಧಿಪಡಿಸಿದ್ದು, ಉತ್ತರ ಪ್ರದೇಶದ ನೊಯ್ಡಾದಲ್ಲಿ ಇರುವ ಘಟಕದಲ್ಲಿ ತಯಾರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.