ADVERTISEMENT

ಮಿವಿ ಡುವೊಪಾಡ್ಸ್ ಬ್ಲೂಟೂತ್ ಇಯರ್‌ಬಡ್ಸ್ ಬಿಡುಗಡೆ

ಮಿವಿ ನೂತನ ಸರಣಿಯ ಇಯರ್‌ಬಡ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2022, 10:55 IST
Last Updated 17 ಆಗಸ್ಟ್ 2022, 10:55 IST
ಮಿವಿ ನೂತನ ಇಯರ್‌ಬಡ್ಸ್‌
ಮಿವಿ ನೂತನ ಇಯರ್‌ಬಡ್ಸ್‌   

ಬೆಂಗಳೂರು: ಗ್ಯಾಜೆಟ್‌ ಪ್ರಿಯರಿಗಾಗಿ ದೇಶಿ ಕಂಪನಿ ಮಿವಿ, ನೂತನ ಬ್ಲೂಟೂತ್‌ ಇಯರ್‌ಬಡ್ಸ್ ಪರಿಚಯಿಸಿದೆ.

ಮಿವಿ ಡುವೊಪಾಡ್ಸ್ ಎಫ್‌50 ದೇಶದಲ್ಲಿ ಬಿಡುಗಡೆಯಾಗಿದ್ದು, ಬ್ಲೂಟೂತ್ 5.1 ಬೆಂಬಲ ಸಹಿತ ಲಭ್ಯವಿದೆ.

ಟೈಪ್‌–ಸಿ ಚಾರ್ಜಿಂಗ್ ಮೂಲಕ ಮಿವಿ ಡುವೊಪಾಡ್ಸ್ ಇಯರ್‌ಬಡ್ಸ್ ಕೇಸ್ ಅನ್ನು ವೇಗವಾಗಿ ಚಾರ್ಜ್ ಮಾಡಬಹುದಾಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಕಪ್ಪು, ಬೀಜ್, ಕೋರಲ್ ಮತ್ತು ನೀಲಿ ಬಣ್ಣಗಳಲ್ಲಿ ನೂತನ ಮಿವಿ ಡುವೊಪಾಡ್ಸ್ 50 ಇಯರ್‌ಬಡ್ಸ್ ಲಭ್ಯವಾಗಲಿದೆ.

ನಾಯ್ಸ್ ಕ್ಯಾನ್ಸಲೇಶನ್, 50 ಗಂಟೆಗಳ ಪ್ಲೇಟೈಮ್ ಹೊಸ ಮಿವಿ ಇಯರ್‌ಬಡ್ಸ್ ವಿಶೇಷತೆಯಾಗಿದ್ದು, ಆರಂಭಿಕ ಕೊಡುಗೆಯಾಗಿ ಫ್ಲಿಪ್‌ಕಾರ್ಟ್ ಮೂಲಕ ₹999 ಕ್ಕೆ ದೊರೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.