ADVERTISEMENT

ಮೊಟೊ ಜಿ9 ಪವರ್‌ನಲ್ಲಿದೆ 6,000 ಎಂಎಎಚ್‌ ಬ್ಯಾಟರಿ; 60 ಗಂಟೆಗಳ ಕಾರ್ಯಾಚರಣೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2020, 8:16 IST
Last Updated 9 ಡಿಸೆಂಬರ್ 2020, 8:16 IST
ಮೊಟೊ ಜಿ9 ಪವರ್‌
ಮೊಟೊ ಜಿ9 ಪವರ್‌   

ಬೆಂಗಳೂರು: ಮೊಟೊರೊಲಾದ ಹೊಸ ಸ್ಮಾರ್ಟ್‌ಫೋನ್‌ 'ಮೊಟೊ ಜಿ9 ಪವರ್‌' ಡಿಸೆಂಬರ್‌ 15ರಿಂದ ಖರೀದಿಗೆ ಸಿಗಲಿದೆ. 6,000 ಎಂಎಎಚ್‌ ಬ್ಯಾಟರಿ ಮತ್ತು 64 ಎಂಪಿ ಕ್ಯಾಮೆರಾ ಸಾಮರ್ಥ್ಯದೊಂದಿಗೆ ಯುವ ಜನರ ಗಮನ ಸೆಳೆದಿದೆ.

ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿ ಸುಮಾರು 60 ಗಂಟೆಗಳ ವರೆಗೂ ಬಳಸಬಹುದಾದ ಬ್ಯಾಟರಿ ಒಳಗೊಂಡಿರುವ ಈ ಫೋನ್‌ಗೆ ₹11,999 ಬೆಲೆ ನಿಗದಿಯಾಗಿದೆ. ಫ್ಲಿಪ್‌ಕಾರ್ಟ್‌ ಮೂಲಕ ಮೊಟೊ ಜಿ9 ಪವರ್‌ ಖರೀದಿಸಿಬಹುದಾಗಿದೆ. ಭಾರತದಲ್ಲಿಯೇ ಈ ಫೋನ್‌ ತಯಾರಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಮೊಟೊರೊಲಾದ ಈ ಹೊಸ ಫೋನ್‌ 6.8 ಇಂಚು ಮ್ಯಾಕ್ಸ್‌ ವಿಷನ್‌ ಎಚ್‌ಡಿ+ ಡಿಸ್‌ಪ್ಲೇ, ಸ್ಟಾಕ್‌ ಆ್ಯಂಡ್ರಾಯ್ಡ್‌, ಸ್ನ್ಯಾಪ್‌ಡ್ರ್ಯಾಗನ್‌ 662 ಪ್ರೊಸೆಸರ್‌, 4ಜಿಬಿ ರ್‍ಯಾಮ್‌ ಹಾಗೂ 64ಜಿಬಿ ಸಂಗ್ರಹ ಸಾಮರ್ಥ್ಯ (ಮೈಕ್ರೊ ಎಸ್‌ಡಿ ಕಾರ್ಡ್‌ ಬಳಸಿ 512ಜಿಬಿ ವರೆಗೂ ವಿಸ್ತರಿಸಬಹುದು) ಒಳಗೊಂಡಿದೆ. ಗೂಗಲ್‌ ಅಸಿಸ್ಟ್‌ಗಾಗಿ ಪ್ರತ್ಯೇಕ ಬಟನ್‌ ನೀಡಲಾಗಿದೆ ಹಾಗೂ ಫೋನ್‌ನಲ್ಲಿ ದೂಳು, ನೀರಿನ ಹನಿಗಳಿಂದ ರಕ್ಷಣೆ ಪಡೆಯುವ ವ್ಯವಸ್ಥೆ ಇದೆ.

64ಎಂಪಿ ಅಲ್ಟ್ರಾ ಹೈ–ರೆಸಲ್ಯೂಷನ್‌ ಗುಣಮಟ್ಟದ ಮೂರು ಕ್ಯಾಮೆರಾ ವ್ಯವಸ್ಥೆ (64ಎಂಪಿ+2ಎಂಪಿ+2ಎಂಪಿ) , ಕ್ವಾಡ್‌ ಪಿಕ್ಸೆಲ್‌ ತಂತ್ರಜ್ಞಾನದಿಂದಾಗಿ ಸೆರೆ ಹಿಡಿಯುವ ಚಿತ್ರಗಳಲ್ಲಿ ಅತ್ಯುತ್ತಮ ಸ್ಪಷ್ಟತೆ ಮತ್ತು ಬಣ್ಣಗಳು ಇರಲಿವೆ. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ.

ADVERTISEMENT

6,000 ಎಂಎಎಚ್‌ ಬ್ಯಾಟರಿ ಇರುವುದರಿಂದ ದೂರದ ಪ್ರಯಾಣದಲ್ಲಿ ಚಾರ್ಜರ್‌ ಅಥವಾ ಪವರ್‌ ಬ್ಯಾಂಕ್‌ ಹೊತ್ತೊಯ್ಯುವ ಕಿರಿಕಿರಿ ಇಲ್ಲದೆ, ವಿಡಿಯೊ ಕರೆಗಳು, ನೆಚ್ಚಿನ ಶೋಗಳ ವೀಕ್ಷಣೆ ಮುಂದುವರಿಸಬಹುದಾಗಿದೆ. ಮೊಬೈಲ್‌ನೊಂದಿಗೆ 20 ವ್ಯಾಟ್‌ ಟರ್ಬೊಪವರ್‌ ಚಾರ್ಜರ್‌ ನೀಡಲಾಗುತ್ತಿದೆ.

ಸ್ನ್ಯಾಪ್‌ಡ್ರ್ಯಾಗನ್‌ 662 ಪ್ರೊಸೆಸರ್‌, 4ಜಿಬಿ ರ್‍ಯಾಮ್‌ ಇರುವುದರಿಂದ ಫೋಟೊಗಳನ್ನು ತೆಗೆಯುವಾಗ, ಗೇಮ್‌ ಆಡಲು ಅಡ್ಡಿ ಉಂಟಾಗುವುದಿಲ್ಲ ಹಾಗೂ ಒಂದೇ ಸಮಯದಲ್ಲಿ ಹಲವು ಆ್ಯಪ್‌ಗಳನ್ನು ತೆರೆದು ಅಡಚಣೆ ಇಲ್ಲದೆ ಕಾರ್ಯಾಚರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.