ADVERTISEMENT

September 2022: ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು

ಸೆಪ್ಟೆಂಬರ್‌ನಲ್ಲಿ ಹಲವು ನೂತನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 10:43 IST
Last Updated 1 ಸೆಪ್ಟೆಂಬರ್ 2022, 10:43 IST
   

ಬೆಂಗಳೂರು: ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಮಾರುಕಟ್ಟೆಯಲ್ಲಿ ಕೂಡ ಅದಕ್ಕೆ ಪೂರಕವಾಗಿ ನೂತನ ಗ್ಯಾಜೆಟ್‌ಗಳು, ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ.

ಪ್ರಮುಖವಾಗಿ, ಆ್ಯಪಲ್, ಏಸಸ್, ಮೊಟೊರೊಲಾ, ಶಓಮಿ ಕಂಪನಿಗಳ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಟೆಕ್ ಲೋಕದಲ್ಲಿ ಸೆಪ್ಟೆಂಬರ್ 2022ರಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ.

ಪೋಕೊ M5 ಸರಣಿ
ಸೆಪ್ಟೆಂಬರ್ 5ರಂದು ಪೋಕೊ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆಯಾಗುತ್ತಿದೆ.

ADVERTISEMENT

ಶಓಮಿ ರೆಡ್ಮಿ 11 ಪ್ರೈಮ್ 5G
ಶಓಮಿ ರೆಡ್ಮಿ ಸರಣಿಯಲ್ಲಿ ಹೊಸದಾಗಿ 11 ಪ್ರೈಮ್ ಸ್ಮಾರ್ಟ್‌ಫೋನ್ ಸೆ. 6ರಂದು ಬಿಡುಗಡೆಯಾಗಲಿದ್ದು, 5G ಸಂಪರ್ಕ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ.

ಆ್ಯಪಲ್ ಐಫೋನ್ 14
ಐಪೋನ್ ನೂತನ ಸರಣಿ 14 ಅನ್ನು ಆ್ಯಪಲ್ ಈ ತಿಂಗಳು ಬಿಡುಗಡೆ ಮಾಡಲಿದೆ. ಸೆ. 7ರಂದು ಆ್ಯಪಲ್ ಈವೆಂಟ್ ನಡೆಯಲಿದ್ದು, ನಾಲ್ಕು ನೂತನ ಐಫೋನ್ 14 ಸರಣಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಮೋಟೊರೊಲಾ ಮೋಟೊ ಎಡ್ಜ್ 30
ಮೋಟೊರೊಲಾ ನೂತನ ಮೋಟೊ ಎಡ್ಜ್ 30 ಸರಣಿ ಸೆ. 8ರಂದು ಅನಾವರಣಗೊಳ್ಳಲಿದೆ.

ಏಸಸ್ ರಾಗ್ ಫೋನ್ 6D
ಹೊಸ ರಾಗ್ ಪೋನ್ 6D ಸರಣಿಯನ್ನು ಏಸಸ್ ಸೆ. 19ರಂದು ಪರಿಚಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.