ADVERTISEMENT

ಭಾರತದಲ್ಲಿ Nokia 8210 4G ಫೀಚರ್ ಫೋನ್‌ ಬಿಡುಗಡೆ ಮಾಡಿದ ನೋಕಿಯಾ; ಬೆಲೆ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2022, 11:01 IST
Last Updated 4 ಆಗಸ್ಟ್ 2022, 11:01 IST
   

ನವದೆಹಲಿ: ಗುಣಮಟ್ಟದ ಫೀಚರ್‌ ಫೋನ್‌ ತಯಾರಿಕಾ ಕಂಪೆನಿ ನೋಕಿಯಾ, ಅತ್ಯುತ್ತಮ ಬಾಳಿಕೆ, ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಸಾಮರ್ಥ್ಯದ ಬ್ಯಾಟರಿ ಸೌಲಭ್ಯಗಳನ್ನು ಹೊಂದಿರುವ ತನ್ನ ಹೊಸ ಉತ್ಪನ್ನ Nokia 8210 4G ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Nokia 8210 4G ಸಹ ನೋಕಿಯಾದ ಎಂದಿನ ಗುಣಮಟ್ಟವನ್ನು ಹೊಂದಿರಲಿದೆ. ಇನ್‌ಬಿಲ್ಟ್‌ ಎಂಪಿ3 ಪ್ಲೇಯರ್‌, ವಯರ್‌ಲೆಸ್‌ ಹಾಗೂ ವಯರ್‌ ಒಳಗೊಂಡ ಸುಧಾರಿತ ಎಫ್‌ಎಂ ರೇಡಿಯೊ, ಸಂವಹನಕ್ಕೆ ನೆರವಾಗುವ4ಜಿ ನೆಟ್‌ವರ್ಕ್‌ ಕನೆಕ್ಟಿವಿಟಿ,ಸುದೀರ್ಘ ಮಾತುಕತೆಗೆ ಸಹಕರಿಸುವಅತ್ಯುತ್ತಮ ಬ್ಯಾಟರಿ, ಉತ್ತಮ ಗುಣಮಟ್ಟದ ಕ್ಯಾಮೆರಾ ಮತ್ತು ಸ್ನೇಕ್‌ ಗೇಮ್‌ನಂತಹ ಆಟಗಳನ್ನು ಒಳಗೊಂಡಿರಲಿದೆ.

ನೋಕಿಯಾದ ಉಳಿದ ಮೊಬೈಲ್‌ಗಳಂತೆದೀರ್ಘ ಬಾಳಿಕೆಗೆ ಒತ್ತು ನೀಡಲಾಗಿರುವ Nokia 8210 4G, 2.8 ಇಂಚಿನಡಿಸ್‌ಪ್ಲೇ, ಆಧುನಿಕ ವೈಶಿಷ್ಟ್ಯಗಳು ಮತ್ತು ಸಾಂಪ್ರದಾಯಿಕ ಶೈಲಿಯ ವಿನ್ಯಾಸ ಹೊಂದಿದೆ. ಭಾರತದಲ್ಲಿ ಈ ಫೋನ್‌ ಅನ್ನು ಆಗಸ್ಟ್‌ 2ರಂದು ಬಿಡುಗಡೆ ಮಾಡಲಾಗಿದ್ದು, Amazon.in ಹಾಗೂ Nokia.com/phones ತಾಣಗಳಲ್ಲಿ ಖರೀದಿಸಬಹುದಾಗಿದೆ.

ADVERTISEMENT

ಈ ಫೋನ್‌ಗಳು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯ ಇದ್ದು,Amazon.inನಲ್ಲಿ ಆಗಸ್ಟ್‌ 6ರಂದು ಮಾರಾಟ ಆರಂಭವಾಗಲಿದೆ. ಬೆಲೆ ₹ 3,999 ಇದೆ.

New Nokia 110 (2022) ಘೋಷಣೆ
ಅತ್ಯಾಧುನಿಕ ವಿನ್ಯಾಸ, ಬಳಕೆ ಸ್ನೇಹಿ ವೈಶಿಷ್ಟ್ಯಗಳು, ಅತ್ಯುತ್ತಮ ಕ್ಯಾಮೆರಾ, ಮ್ಯೂಸಿಕ್‌ ಪ್ಲೇಯರ್‌, ಆಟೊ ಕಾಲ್‌ ರೆಕಾರ್ಡಿಂಗ್‌ ಸೌಲಭ್ಯ, ಗರಿಷ್ಠ ಸ್ಟೋರೇಜ್‌ ಸಾಮರ್ಥ್ಯ ಮತ್ತು ಗುಣಮಟ್ಟಕ್ಕೆ ಆದ್ಯತೆ ಹೊಂದಿರುವNew Nokia 110 ಅನ್ನು ಈ ವರ್ಷ ಬಿಡುಗಡೆ ಮಾಡುವುದಾಗಿಯೂನೋಕಿಯಾ ಘೋಷಿಸಿದೆ.

ಕಡುಗಪ್ಪು, ಗುಲಾಬಿ ಮತ್ತು ಹಸಿರು–ನೀಲಿ ಮಿಶ್ರಿತ ಬಣ್ಣಗಳಲ್ಲಿ ಸಿಗಲಿರುವ ಈ ಫೋನ್‌, 1000 mAh ಸಾಮರ್ಥ್ಯದಬ್ಯಾಟರಿ ಮತ್ತು32GB ಸ್ಟೋರೇಜ್‌ ಸಾಮರ್ಥ್ಯ ಹೊಂದಿರಲಿದೆ.ಕಡುಗಪ್ಪು ಮತ್ತು ಹಸಿರು–ನೀಲಿ ಮಿಶ್ರಿತ ಬಣ್ಣದ ಫೋನ್‌ ಬೆಲೆ₹ 1,699 ಹಾಗೂ ಗುಲಾಬಿ ವರ್ಣದ ಫೋನ್‌ ಬೆಲೆ ₹ 1,799 ಇರಲಿದೆ. ₹ 299 ಬೆಲೆಯ ಇಯರ್‌ ಫೋನ್‌ ಉಚಿತವಾಗಿ ಸಿಗಲಿದ್ದು, ಎಲ್ಲಾ ಮಳಿಗೆಗಳು ಮತ್ತು Nokia.com/phones ಸೇರಿದಂತೆಎಲ್ಲಾ ಇ–ಕಾಮರ್ಸ್‌ ತಾಣಗಳಲ್ಲಿ ಖರೀದಿಸಬಹುದಾಗಿದೆ.

ಈ ಎರಡೂ ಫೋನ್‌ಗಳು (Nokia 8210 4G ಮತ್ತು New Nokia 110) ಒಂದು ವರ್ಷದ ರಿಪ್ಲೇಸ್‌ಮೆಂಟ್‌ ಗ್ಯಾರಂಟಿ ಸೌಲಭ್ಯ ಹೊಂದಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.