ADVERTISEMENT

ಭಾರತದಲ್ಲಿ ನೋಕಿಯಾ ಹೊಸ ಫೋನ್‌ಗಳು: ಸಿ3, 5.3, 150, 125 ಅನಾವರಣ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 13:49 IST
Last Updated 31 ಆಗಸ್ಟ್ 2020, 13:49 IST
ನೋಕಿಯಾದ ಹೊಸ ಫೋನ್‌ಗಳು
ನೋಕಿಯಾದ ಹೊಸ ಫೋನ್‌ಗಳು   

ಎಚ್‌ಎಂಡಿ ಗ್ಲೋಬಲ್‌ ಭಾರತದಲ್ಲಿ ನೋಕಿಯಾದ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ನೋಕಿಯಾ 5.3, ನೋಕಿಯಾ ಸಿ3 ಸ್ಮಾರ್ಟ್‌ಫೋನ್‌ಗಳು ಹಾಗೂ ನೋಕಿಯಾ 125, ನೋಕಿಯಾ 150 ಫೀಚರ್‌ ಫೋನ್‌ಗಳನ್ನು ಅನಾವರಣಗೊಳಿಸಿದೆ.

ನೋಕಿಯಾ ಸಿ3 ಫೋನ್‌ ಭಾರತದಲ್ಲಿಯೇ ತಯಾರಿಸಲಾಗಿದ್ದು, 1 ವರ್ಷದವರೆಗೂ ಫೋನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಬದಲಿಸಿಕೊಡುವ ಭರವಸೆ ನೀಡಿದೆ. 5.99 ಇಂಚು ಎಚ್‌ಡಿ ಡಿಸ್‌ಪ್ಲೇ ಮತ್ತು ಆಕ್ಟಾ ಕೋರ್‌ ಪ್ರೊಸೆಸರ್‌ ಅಳವಡಿಸಿಕೊಂಡಿರುವ ಫೋನ್‌ ಕಾರ್ಯಾಚರಣೆಗೆ ಆ್ಯಂಡ್ರಾಯ್ಡ್‌ 10 ಒಎಸ್‌ ಒಳಗೊಂಡಿದೆ. ಹಿಂಬದಿಯಲ್ಲಿ 8ಎಂಪಿ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 5ಎಂಪಿ ಲೆನ್ಸ್‌ ಇದೆ. ತೆಗೆಯಬಹುದಾದ 3,040 ಎಂಎಎಚ್‌ ಬ್ಯಾಟರಿ, ಗೂಗಲ್‌ ಅಸಿಸ್ಟಂಟ್‌ ಬಟನ್‌, 3.5ಎಂಎಂ ಹೆಡ್‌ಫೋನ್‌ ಜಾಕ್‌, ಡ್ಯುಯಲ್‌ ಸಿಮ್‌ ಉಪಯೋಗಿಸುವ ವ್ಯವಸ್ಥೆ ನೀಡಲಾಗಿದೆ.

ಸಿ3 ಮಾದರಿ ಫೋನ್‌ಗಳು 2ಜಿಬಿ ರ್‍ಯಾಮ್‌ ಮತ್ತು 16ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 3ಜಿಬಿ ರ್‍ಯಾಮ್‌ ಮತ್ತು 32ಜಿಬಿ ಸಂಗ್ರಹ ಸಾಮರ್ಥ್ಯದೊಂದಿಗೆ ಬರಲಿದೆ. ಫೋನ್‌ ಬೆಲೆ ಕ್ರಮವಾಗಿ ₹7,499 ಹಾಗೂ ₹8,999 ನಿಗದಿಯಾಗಿದೆ. ಸೆಪ್ಟೆಂಬರ್‌ 10ರಿಂದ ಸ್ಮಾರ್ಟ್‌ಫೋನ್‌ ಬುಕ್‌ ಮಾಡಬಹುದಾಗಿದೆ.

ADVERTISEMENT

ನೋಕಿಯಾ 5.3 ಮಾದರಿಯ ಫೋನ್‌ಗಳು ಇಂದಿನಿಂದಲೇ ಖರೀದಿಗೆ ಸಿಗಲಿವೆ. 4ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸಂಗ್ರಹ ಹಾಗೂ 6ಜಿಬಿ ರ್‍ಯಾಮ್‌ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯ; ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. ಬೆಲೆ ಕ್ರಮವಾಗಿ ₹13,999 ಹಾಗೂ ₹15,499 ನಿಗದಿಯಾಗಿದೆ. ಫೋನ್‌ ಸಿಯಾನ್‌, ಸ್ಯಾಂಡ್‌ ಮತ್ತು ಚಾರ್ಕೋಲ್‌ ಮೂರು ಬಣ್ಣಗಳಲ್ಲಿ ಸಿಗಲಿದ್ದು, ಆ್ಯಂಡ್ರಾಯ್ಡ್‌ 11 ಮತ್ತು 12 ಅಪ್‌ಡೇಟ್‌ ದೊರೆಯಲಿದೆ.

ಹೊಸ ನೋಕಿಯಾ 5.3 ಫೋನ್‌ಗಳು 6.55 ಇಂಚು ಎಚ್‌ಡಿ+ ಡಿಸ್‌ಪ್ಲೇ, ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 665 ಪ್ರೊಸೆಸರ್‌, ಹಿಂಬದಿಯಲ್ಲಿ 13 ಎಂಪಿ ಮುಖ್ಯ ಕ್ಯಾಮೆರಾ, 2ಎಂಪಿ ಡೆಪ್ತ್‌ ಸೆನ್ಸರ್‌, 5ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌ ಹಾಗೂ 2ಎಂಪಿ ಮ್ಯಾಕ್ರೊ ಸೆನ್ಸರ್‌ ಸೇರಿ ನಾಲ್ಕು ಕ್ಯಾಮೆರಾಗಳಿವೆ. ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ನೀಡಲಾಗಿದೆ. 4,000ಎಂಎಎಚ್‌ ಬ್ಯಾಟರಿ ಹಾಗೂ ಯುಎಸ್‌ಬಿ ಟೈಪ್‌–ಸಿ ಪೋರ್ಟ್‌ ಇದೆ.

ಫೀಚರ್‌ ಫೋನ್‌ಗಳಾದ ನೋಕಿಯಾ 150 ಮತ್ತು ನೋಕಿಯಾ 125 ಮಾದರಿಗಳಿಗೆ ಕ್ರಮವಾಗಿ ₹2,299 ಮತ್ತು ₹1,999 ಬೆಲೆ ನಿಗದಿಯಾಗಿದೆ. ನೋಕಿಯಾ 125 ಫೋನ್‌ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಸಿಗಲಿದೆ. ನೋಕಿಯಾ 150 ಫೋನ್‌ 2.4 ಇಂಚು ಕ್ಯುವಿಜಿಎ ಡಿಸ್‌ಪ್ಲೇ, ಮೀಡಿಯಾಟೆಕ್‌ ಚಿಪ್‌ಸೆಟ್‌ ಒಳಗೊಂಡಿದೆ ಹಾಗೂ ಡ್ಯುಯಲ್‌ ಸಿಮ್‌ ಅಳವಡಿಸುವ ಅವಕಾಶವಿದೆ. ವಿಜಿಎ ಕ್ಯಾಮೆರಾ, ತೆಗೆಯಬಹುದಾದ 1,200ಎಂಎಎಚ್‌ ಬ್ಯಾಟರಿ ಹಾಗೂ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ ಸಂಗ್ರಹ 32ಜಿಬಿ ವರೆಗೂ ವಿಸ್ತರಿಸಿಕೊಳ್ಳಬಹುದು. ನೋಕಿಯಾ 125 ಮಾದರಿಯಲ್ಲೂ 150 ಫೋನ್‌ನಷ್ಟೇ ಬ್ಯಾಟರಿ ಮತ್ತು ಡಿಸ್‌ಪ್ಲೇ ಇದೆ. ಆದರೆ, ಮೀಡಿಯಾ ಉಪಯೋಗದ ಆಯ್ಕೆಗಳಲ್ಲಿ ಬದಲಾವಣೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.