ಒನ್‌ಪ್ಲಸ್ ನಾರ್ಡ್ 5 ಮತ್ತು ಸಿಇ5 ಸ್ಮಾರ್ಟ್‌ಫೋನ್‌ಗಳು
ಬೆಂಗಳೂರು: ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಒನ್‌ಪ್ಲಸ್ ಇತ್ತೀಚಿನ ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ನಾರ್ಡ್ 5 ಮತ್ತು ನಾರ್ಡ್ CE 5 ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಆ್ಯಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂ ಮತ್ತು ಅಮೊಲೆಡ್ ಡಿಸ್‌ಪ್ಲೇ ಹೊಂದಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿವೆ. ಜತೆಗೆ ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿವೆ.
₹20ಸಾವಿರದಿಂದ ₹35 ಸಾವಿರ ಬೆಲೆಗೆ ಲಭ್ಯವಿರುವ ಈ ಎರಡು ಮಾದರಿಯ ಫೋನ್‌ಗಳ ಕಾರ್ಯಕ್ಷಮತೆ, ಸೌಲಭ್ಯ ಮತ್ತು ಒನ್‌ಪ್ಲಸ್‌ನ ಅನುಭೂತಿಯನ್ನು ಅಳವಡಿಸಿಕೊಂಡು, ಬಳಕೆದಾರರಿಗೆ ಹೊಸತನವನ್ನು ನೀಡುವಂತಿವೆ ಎಂದು ಕಂಪನಿ ಹೇಳಿದೆ.
ಎರಡೂ ಫೋನ್‌ಗಳು ಕೆಲ ವಿಭಾಗಗಳಲ್ಲಿ ಒಂದೇ ರೀತಿಯ ಹಾರ್ಡ್‌ವೇರ್‌ಗಳನ್ನು ಹೊಂದಿದ್ದರೂ, ಬಳಕೆದಾರರ ಅಪೇಕ್ಷೆಗೆ ತಕ್ಕಂತೆ ಇವುಗಳನ್ನು ವಿಭಜಿಸಿ, ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ನಾರ್ಡ್ 5 ಅಥವಾ ನಾರ್ಡ್ ಸಿಇ5 ನಡುವಿನ ಹಾರ್ಡ್‌ವೇರ್ ವ್ಯತ್ಯಾಸವೇನು ಎಂಬುದನ್ನು ಇಲ್ಲಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.