ADVERTISEMENT

ಗೃಹೋಪಯೋಗಿ ವಸ್ತುಗಳ ಬಳಕೆಯಲ್ಲಿ ಶೇ 60ರಷ್ಟು ಜನರಿಗೆ ಆರೋಗ್ಯಕರ ಜೀವನದ ಕಾಳಜಿ

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:15 IST
Last Updated 16 ಮೇ 2024, 15:15 IST
   

ನವದೆಹಲಿ: ಗೃಹಯೋಪಯೋಗಿ ವಸ್ತುಗಳಾದ ಹವಾನಿಯಂತ್ರಿತ ಸಾಧನ, ಬಟ್ಟೆ ತೊಳೆಯುವ ಯಂತ್ರ, ಫ್ರಿಟ್ಜ್‌, ಮೈಕ್ರೊವೇವ್ ಅವನ್ ಬಗ್ಗೆ ಯುವ ಪಾಲಕರ ಸಮೀಕ್ಷೆ ನಡೆಸಿರುವ ಪ್ಯಾನಾಸೊನಿಕ್ ಲೈಫ್ ಸೊಲೂಷನ್ಸ್‌ ಕಂಪನಿಯು, ಶೇ 60ರಷ್ಟು ಜನರು ತಮ್ಮ ಆರೋಗ್ಯಕರ ಜೀವನ ಕುರಿತು ಚಿಂತಿತರಾಗಿದ್ದಾರೆ ಎಂದಿದೆ.

ಈ ಸಮೀಕ್ಷೆಯು ಸುಮಾರು 1500 ಜನರನ್ನು ಒಳಗೊಂಡಿತ್ತು. ಇದರಲ್ಲಿ ದೇಶದ ಎಲ್ಲಾ ಬಗೆಯ ಪ್ರದೇಶಗಳ ಜನರೂ ಪಾಲ್ಗೊಂಡಿದ್ದರು. ಇಡೀ ಜಗತ್ತು ಈಗ ಆರೋಗ್ಯಕರ ಜೀವನದತ್ತ ಮುಖ ಮಾಡಿದೆ. ತಿನ್ನುವ ಆಹಾರ, ಶುಚಿತ್ವದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಇದಕ್ಕಾಗಿ ತಾವು ಪಡುತ್ತಿರುವ ಕಷ್ಟಗಳ ಕುರಿತು ಇವರು ಮಾತನಾಡಿದ್ದಾರೆ. ತಮಿಳುನಾಡಿನ ಶೇ 70ರಷ್ಟು ಜನರು ಆರೋಗ್ಯಕರ ಜೀವನ ಮತ್ತು ಆಹಾರ ಕ್ರಮದ ಕುರಿತು ಹೆಚ್ಚು ಕಾಳಜಿ ಹೊಂದಿದ್ದಾರೆ. ಜತೆಗೆ, ವಿದ್ಯುತ್ ಬೆಲೆ ಏರಿಕೆ, ಹೆಚ್ಚಳವಾಗಿರುವ ನಿರ್ವಹಣೆಯ ವೆಚ್ಚ, ಉಪಕರಣಗಳ ದೀರ್ಘಬಾಳಿಕೆ ಕುರಿತು ಅತೀವ ಕಾಳಜಿ ವಹಿಸಿದ್ದಾರೆ.

ಯುವ ಪಾಲಕರು ಆರೋಗ್ಯಕರ ಜೀವನ ನಡೆಸಬೇಕೆಂಬ ಹಂಬಲ ಹೊಂದಿದ್ದಾರೆ. ಆದರೆ ಒಳಾಂಗಣದಲ್ಲೇ ಶುಚಿಯಾದ ಗಾಳಿ ಸಿಗದ ಕುರಿತು ಚಿಂತಿತರಾಗಿದ್ದಾರೆ. ಶೇ 44ರಷ್ಟು ಜನರು ಹವಾನಿಯಂತ್ರಿತ ಸಾಧನ ಹೆಚ್ಚು ಶಬ್ದ ಮಾಡುವಂತದ್ದು, ಶುದ್ಧ ಗಾಳಿಯನ್ನು ನೀಡುವ ಕುರಿತು ಗೊಂದಲದಲ್ಲಿದ್ದಾರೆ. ಶೇ 85ರಷ್ಟು ಜನರಿಗೆ ನಿರ್ವಹಣೆ ಹಾಗೂ ವಿದ್ಯುತ್ ಹೆಚ್ಚು ಖರ್ಚಾಗುವ ಚಿಂತೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 57ರಷ್ಟು ಜನರಿಗೆ ಸ್ಮಾರ್ಟ್ ಭವಿಷ್ಯ ಕುರಿತು ಕಾಳಜಿ ಹೊಂದಿದ್ದಾರೆ’ ಎಂದಿದ್ದಾರೆ.

ADVERTISEMENT

ಶೇ 69ರಷ್ಟು ಜನರಿಗೆ ಮಕ್ಕಳ ಕಾಳಜಿ, ಶೇ 57ರಷ್ಟು ಜನರಿಗೆ ಪರಿಸರ ಕಾಳಜಿ ಹೊಂದಿದ್ದಾರೆ. ಶೇ 70ರಷ್ಟು ಜನರಿಗೆ ತಾವು ಸಂಸ್ಕರಿಸಿ ಇಡುವ ಆಹಾರ ಪದಾರ್ಥಗಳು ತಾಜಾತನದಿಂದ ಹಾಗೂ ಯಾವುದೇ ಪೌಷ್ಟಿಕಾಂಶ ನಷ್ಟವಾಗದಂತಿರಬೇಕು ಎಂದಿದ್ದಾರೆ ಎಂದು ವರದಿ ಹೇಳಿದೆ.

ಪ್ಯಾನಾಸೊನಿಕ್ ಮಾರ್ಕೆಟಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಫುಮಿಯಾಸು ಫುಜಿಮೊರಿ ಪ್ರತಿಕ್ರಿಯಿಸಿ, ‘ಗ್ರಾಹಕ ಕೇಂದ್ರಿತ ಕಂಪನಿಯಾಗಿ, ಭಾರತದ ಯುವ ಪಾಲಕರ ಅಪೇಕ್ಷೆ ಅರಿಯುವುದು ನಮ್ಮ ಕರ್ತವ್ಯ. ಅದರಲ್ಲೂ, ಸರಿಯಾದ ಉಪಕರಣ ಖರೀದಿಯ ಜ್ಞಾನ ಇರಬೇಕು ಎಂಬ ಅಪೇಕ್ಷೆ ನಮ್ಮದು. ಖರೀದಿಸುವ ಉತ್ಪನ್ನ ಗುಣಮಟ್ಟದ್ದಾಗಿರಬೇಕು, ವಿದ್ಯುತ್ ಉಳಿತಾಯ ಖಾತ್ರಿ ನೀಡಬೇಕು, ದೀರ್ಘ ಬಾಳಿಕೆ ಬರುವಂತಿರಬೇಕು. ಹೀಗಾಗಿ ಹವಾನಿಯಂತ್ರಿತ ಸಾಧನದಲ್ಲಿ ಸ್ಲೀಪ್ ಪ್ರೊಫೈಲ್ ಅಳವಡಿಸಲಾಗಿದೆ. ಫ್ರಿಟ್ಜ್‌ನಲ್ಲಿ ತಾಜಾತನಕ್ಕೆ ಒತ್ತು ನೀಡಲಾಗಿದೆ. ವಾಷಿಂಗ್‌ ಮಿಷನ್‌ನಲ್ಲಿ ಕಿಝುಕೈ ವಾಷ್ ಅಳವಡಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.