ADVERTISEMENT

ಐಫೋನ್ ಕೊಳ್ಳಲು ಫಿಲಿಪೈನ್ಸ್ ವ್ಯಕ್ತಿ 157 ದಿನ ದುಡಿಯಬೇಕು: ಹಾಗಾದ್ರೆ ಭಾರತೀಯ?

ಏಜೆನ್ಸೀಸ್
Published 21 ಸೆಪ್ಟೆಂಬರ್ 2018, 14:52 IST
Last Updated 21 ಸೆಪ್ಟೆಂಬರ್ 2018, 14:52 IST
   

ನವದೆಹಲಿ: ಭಾರತೀಯನೊಬ್ಬ ಪ್ರತಿಷ್ಠಿತ ಆ್ಯಪಲ್‌ ಕಂಪೆನಿಯ ಐಪೋನ್‌ ಒಂದನ್ನು ಖರೀದಿಸಲು ಬಯಸಿದರೆ ಎಷ್ಟು ಹಣ ಬೇಕಾದೀತು..? ಅದಕ್ಕಾಗಿ ಆತ ಸರಾಸರಿ ಎಷ್ಟು ದಿನ ದುಡಿಯಬೇಕು? ಹೀಗೆ ಲೆಕ್ಕ ಹಾಕುತ್ತಾ ಕುಳಿತರೆ ತಲೆ ತಿರುಗಬಹುದು. ಯಾಕೆಂದರೆ ಕೇವಲ ಒಂದು ಐಫೋನ್‌ ಖರೀದಿಸಲು ಕನಿಷ್ಟ 59.9 ದಿನಗಳಾದರೂ ದುಡಿಯಲೇಬೇಕು. ಅರ್ಥಾತ್‌ ಎರಡು ತಿಂಗಳು!

ಅಂದಹಾಗೆ ಇದು ಅಂದಾಜು ಲೆಕ್ಕವಷ್ಟೇ ಇನ್ನೂ ಹೆಚ್ಚು ದಿನವಾದರೂ ಆದೀತು.

Picodi.com ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಈ ಸಂಸ್ಥೆ ಭಾರತ ಸೇರಿದಂತೆ ಒಟ್ಟು 42 ದೇಶಗಳನ್ನು ಅಧ್ಯಯನಕ್ಕಾಗಿ ಬಳಸಿಕೊಂಡು ಅಂಕಿ–ಅಂಶ ಸಿದ್ಧಪಡಿಸಿದೆ. ಐ ಫೋನ್‌ಗಳಲ್ಲೇ ಅತ್ಯಂತ ಬೇಡಿಕೆ ಇರುವುದು64ಜಿಬಿ ಸಾಮರ್ಥ್ಯದ ಐಫೋನ್‌ ಎಕ್ಸ್‌ಎಸ್‌ಗೆ. ಇದರ ಬೆಲೆ ₹ 99,000. ಈ ಬೆಲೆಯನ್ನು ಗಮನದಲ್ಲಿರಿಸಿ ವಿವಿಧ ದೇಶಗಳ ಜನರ ಸರಾಸರಿ ವೇತನವನ್ನು ಪರಿಗಣಿಸಿ Picodi.com ಅಂಕಿ ಅಂಶ ಬಿಡುಗಡೆ ಮಾಡಿದೆ.

ADVERTISEMENT

ಅದರ ಪ್ರಕಾರ ಅತಿ ಕಡಿಮೆ ದಿನ ದುಡಿದು ಐಫೋನ್‌ ಖರೀದಿಸಬಲ್ಲಷ್ಟು ವೇತನ ಲಭಿಸುವುದು ಸ್ವಿಟ್ಜರ್‌ಲೆಂಡ್‌ನವರಿಗೆ. ಈ ದೇಶದವರು ಕೇವಲ ಸರಾಸರಿ 5.1 ದಿನ ದುಡಿದರೆ ಸಾಕು. ಅಮೆರಿಕೆನ್ನರು 8.4, ಜಪಾನಿನವರು 8.8 ಹಾಗೂ ಚೀನಾದವರು 50.5 ದಿನ ದುಡಿಯಬೇಕು. ಫಿಲಿಪೈನ್ಸ್ ಜನರು ಸರಾಸರಿ 156.6 ದಿನಗಳ ಕಾಲ ದುಡಿಯಬೇಕಾಗುತ್ತದೆ.

ಯಾವ ದೇಶದ ಜನರು ಎಷ್ಟು ದಿನ ದುಡಿಯಬೇಕು ಎನ್ನುವುದರ ವಿವರ ಇಲ್ಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.