ADVERTISEMENT

POCO F2: ಮಾರುಕಟ್ಟೆಗೆ ಬರುತ್ತಿದೆ ಹೊಸ ಪೋಕೋ ಮೊಬೈಲ್ ಫೋನ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 9:04 IST
Last Updated 5 ಜನವರಿ 2021, 9:04 IST
ಫೋಕೋ ಹೊಸ ಫೋನ್
ಫೋಕೋ ಹೊಸ ಫೋನ್   

ಪೋಕೋ ಬ್ರ್ಯಾಂಡ್ ಅಡಿಯಲ್ಲಿ ಹೊಸ ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಲು ಸಜ್ಜಾಗುತ್ತಿದೆ. ಚೀನಾ ಮೂಲದ ಪೋಕೋ, ಈಗಾಗಲೇ ದೇಶದ ಮಾರುಕಟ್ಟೆಗೆ ವಿವಿಧ ಫೋನ್ ಪರಿಚಯಿಸಿದೆ. ಈ ಬಾರಿ ಹೊಸದಾಗಿ ಪೋಕೋ ಸಿರೀಸ್ ಪೋಕೋ F2 ಫೋನ್ ಬಿಡುಗಡೆಗೆ ಸಿದ್ಧವಾಗುತ್ತಿದೆ.

ಪೋಕೋ F2 ಫೋನ್

ಪೋಕೋ ದೇಶದ ಗ್ಯಾಜೆಟ್ ಮಾರುಕಟ್ಟೆಗೆ Poco X2, X3, M2 Pro, M2, ಮತ್ತು C3 ಎಂಬ ಬಹುಬೇಡಿಕೆಯ ಫೋನ್ ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಪೋಕೋ ಮೊಬೈಲ್ ಅಧಿಕ ಮಾರಾಟ ಹೊಂದಿದೆ. ಅಲ್ಲದೆ, ಪೋಕೋ ಹೊಸ ತಂತ್ರಜ್ಞಾನಕ್ಕೆ ಪೂರಕವಾಗಿ ನೂತನ ಫೋನ್ ಪರಿಚಯಿಸುತ್ತಿದೆ.

ADVERTISEMENT

ಟ್ವಿಟರ್ ಮೂಲಕ ಸುಳಿವು

ಹೊಸ ಪೋಕೋ ಎಫ್ ಸಿರೀಸ್ ಫೋನ್ ಬಿಡುಗಡೆ ಕುರಿತು ಕಂಪನಿ ಟ್ವಿಟರ್ ಮೂಲಕ ಸುಳಿವು ನೀಡಿದೆ. ಟೀಸರ್ ಒಂದನ್ನು ಟ್ವೀಟ್ ಮಾಡಿರುವ ಪೋಕೋ, ಶೀಘ್ರದಲ್ಲೇ ಮತ್ತೊಂದು ಆಕರ್ಷಕ ಮೊಬೈಲ್ ಹೊರತರುತ್ತಿರುವ ಕುರಿತು ತಿಳಿಸಿದೆ. 2021ರಲ್ಲಿ ಪೋಕೋ ಬಿಡುಗಡೆ ಮಾಡುತ್ತಿರುವ ಮೊದಲ ಫೋನ್ ಇದಾಗಿರಲಿದೆ.

ಶಿಯೋಮಿ ಸಬ್ ಬ್ರ್ಯಾಂಡ್

ಪೋಕೋ ಪ್ರಸ್ತುತ ಸ್ವತಂತ್ರ ಬ್ರ್ಯಾಂಡ್ ಆಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿಂದೆ ಪೋಕೋ ಶಿಯೋಮಿ ರೆಡ್ಮಿ ಕಂಪನಿಯ ಸಬ್ ಬ್ರ್ಯಾಂಡ್ ಆಗಿತ್ತು ಎನ್ನುವುದು ಗಮನಾರ್ಹ‌. ಈ ಮೊದಲು ಶಿಯೋಮಿ ಒಡೆತನದಲ್ಲಿದ್ದ ಪೋಕೋ, ಈ ಬಾರಿ ಹೊಸ ಎಫ್ ಸಿರೀಸ್ ಫೋನ್ ಅನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಆಂಡ್ರಾಯ್ಡ್ 11 ಆಧಾರಿತ MIUI OS ಮತ್ತು 4,250mAh ಬ್ಯಾಟರಿ ಹಾಗೂ AMOLED ಡಿಸ್ಪ್ಲೇ ಜತೆಗೆ 120Hz ರಿಫ್ರೆಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.