ADVERTISEMENT

ಇಸ್ರೊದ 'ನಾವಿಕ್' ಮಾರ್ಗಸೂಚಿ ವ್ಯವಸ್ಥೆಗೆ ಸಹಕಾರಿ 'ಸ್ನ್ಯಾಪ್‌ಡ್ರ್ಯಾಗನ್' ಚಿಪ್‌

ಏಜೆನ್ಸೀಸ್
Published 21 ಜನವರಿ 2020, 9:33 IST
Last Updated 21 ಜನವರಿ 2020, 9:33 IST
   

ಸ್ಮಾರ್ಟ್‌ಫೋನ್‌ಗಳಿಗೆ ಮತ್ತಷ್ಟು ವೇಗ ನೀಡುವ, ಹೊಸ ಸಾಧ್ಯತೆಗಳಿಗೆ ಅವಕಾಶ ನೀಡುವ ಸ್ನ್ಯಾಪ್‌ಡ್ರ್ಯಾಗನ್‌ ಚಿಪ್‌ಗಳನ್ನು ಕ್ವಾಲ್ಕಾಮ್‌ ಬಿಡುಗಡೆ ಮಾಡಿದೆ.

ವೈಫ್‌ 6, ಬ್ಲೂಟೂಥ್‌ 5.1 ಕಾರ್ಯನಿರ್ವಹಣೆಗೆ ಸಹಕಾರಿಯಾಗುವ ಹಾಗೂ ವೇಗದ 4ಜಿ ಸಂಪರ್ಕ, ವಾಯ್ಸ್‌ ಅಸಿಸ್ಟಂಟ್‌ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಅಳವಡಿಕೆಗೆ ಹೊಸ ಜಿಪ್‌ಗಳು ಅವಕಾಶ ನೀಡುತ್ತವೆ. ಜಗತ್ತಿನಾದ್ಯಂತ 5ಜಿ ಅಭಿವೃದ್ಧಿ ಬಗೆಗೆ ಗಮನ ಕೇಂದ್ರೀಕರಿಸಿದ್ದರೆ, ಭಾರತ ಸೇರಿದಂತೆ ಇತರೆ ವಲಯಗಳಿಗಾಗಿ 4ಜಿ ತಂತ್ರಜ್ಞಾನ ಅಭಿವೃದ್ಧಿ ಮುಂದುವರಿಸುವುದಾಗಿ ಕ್ವಾಲ್ಕಾಮ್‌ ಹೇಳಿದೆ.

ಕ್ವಾಲ್ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 720ಜಿ,ಸ್ನ್ಯಾಪ್‌ಡ್ರ್ಯಾಗನ್‌ 662 ಹಾಗೂಸ್ನ್ಯಾಪ್‌ಡ್ರ್ಯಾಗನ್‌ 460 ಅನಾವರಣಗೊಂಡಿದೆ. ಮೂರೂ ಮಾದರಿಯ ಚಿಪ್‌ಗಳಲ್ಲಿ ಕ್ವಾಲ್ಕಾಮ್‌ ಎಐ ಎಂಜಿನ್‌ ಹಾಗೂ ಲೊಕೇಶ್‌ ವ್ಯವಸ್ಥೆಯನ್ನು ಒಳಗೊಂಡಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿ ಪಡಿಸಿರುವ ಏಳು ಉಪಗ್ರಹಗಳ ಮೂಲಕ ನಿಖರ ಮಾರ್ಗಸೂಚಿಸುವ 'ನಾವಿಕ್‌' ವ್ಯವಸ್ಥೆಗೆ ಸಹಕಾರಿಯಾಗಲಿದೆ. ನಾವಿಕ್‌ಗೆ ಸಹಕಾರಿಯಾಗಬಲ್ಲ ಮೊಬೈಲ್‌ ಚಿಪ್‌ಗಳನ್ನು ಇದೇ ಮೊದಲ ಬಾರಿಗೆ ಕ್ವಾಲ್ಕಾಮ್‌ ಅಭಿವೃದ್ಧಿ ಪಡಿಸಿದೆ.

ADVERTISEMENT

ಈ ವರ್ಷ ಮೊದಲ ತ್ರೈಮಾಸಿಕದಲ್ಲಿ ಸ್ನ್ಯಾಪ್‌ಡ್ರ್ಯಾಗನ್‌ 720ಜಿ ಚಿಪ್‌ ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಹೊರಬರಲಿದೆ. ರಿಯಲ್‌ಮಿ ಮತ್ತು ಶಿಯೋಮಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಆರಂಭಿಕವಾಗಿ 720ಜಿ ಚಿಪ್‌ ಬಳಕೆಗೆ ಬರಲಿದೆ ಎನ್ನಲಾಗುತ್ತಿದೆ.

ಎಚ್‌ಡಿಆರ್‌ ಗೇಮಿಂಗ್‌, 4ಕೆ ವಿಡಿಯೊ ರೆಕಾರ್ಡಿಂಗ್‌ ಹಾಗೂ 192 ಮೆಗಾಪಿಕ್ಸೆಲ್‌ ಫೋಟೊ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.