ADVERTISEMENT

ಸ್ಮಾರ್ಟ್‌ಫೋನ್ ತಯಾರಿಕೆಗೆ ಕೊರೊನಾ ವೈರಸ್ ಪ್ರಭಾವ; ರೆಡ್‌ಮಿ ನೋಟ್ 8 ಬೆಲೆ ಏರಿಕೆ

ಏಜೆನ್ಸೀಸ್
Published 13 ಫೆಬ್ರುವರಿ 2020, 7:29 IST
Last Updated 13 ಫೆಬ್ರುವರಿ 2020, 7:29 IST
ರೆಡ್‌ಮಿ ನೋಟ್‌ 8 ಸ್ಮಾರ್ಟ್‌ಫೋನ್‌
ರೆಡ್‌ಮಿ ನೋಟ್‌ 8 ಸ್ಮಾರ್ಟ್‌ಫೋನ್‌    
""
""

ಬೆಂಗಳೂರು:ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಶಿಯೋಮಿ, ಭಾರತದಲ್ಲಿ 'ರೆಡ್‌ಮಿ ನೋಟ್‌ 8' ಫೋನ್‌ಗಳ ಬೆಲೆ ಹೆಚ್ಚಿಸಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾದಿಂದ ಪೂರೈಕೆ ವ್ಯತ್ಯಯ ಉಂಟಾಗಿರುವುದರಿಂದ ಹೊಸ ಫೋನ್‌ಗಳ ಬೆಲೆ ಏರಿಕೆ ಮಾಡಿದೆ.

ಈಗಾಗಲೇ ಅಮೆಜಾನ್‌ ಇ–ಕಾಮರ್ಸ್‌ ವೇದಿಕೆಯಲ್ಲಿ 'ರೆಡ್‌ಮಿ ನೋಟ್‌ 8' ಔಟ್‌ ಆಫ್‌ ಸ್ಟಾಕ್‌ ಆಗಿದೆ. ಬಹುತೇಕ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸುತ್ತಿದ್ದರೂ ಬಿಡಿಭಾಗಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ವ್ಯಾಪಿಸಿರುವುದರಿಂದ ಚೀನಾದಲ್ಲಿ ಹಲವು ಕಾರ್ಖಾನೆಗಳು ಕಾರ್ಯ ಸ್ಥಗಿತಗೊಳಿಸಿವೆ ಹಾಗೂ ಸರಕು ಸಾಗಣೆಯೂ ಸ್ಥಗಿತಗೊಂಡಿದೆ.

ಪ್ರಸ್ತುತ ಶಿಯೋಮಿ ಫೋನ್‌ ಬೆಲೆ ₹500ರ ವರೆಗೂ ಹೆಚ್ಚಳ ಮಾಡಿದೆ. ಪೂರೈಕೆಯಲ್ಲಿ ವ್ಯತ್ಯಯ ಸಮಸ್ಥಿತಿಗೆ ಬರುವವರೆಗೂ ತಾತ್ಕಾಲಿಕವಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. 'ರೆಡ್‌ಮಿ ನೋಟ್‌ 8' 4ಜಿಬಿ+ 64 ಜಿಬಿ ಮಾದರಿಯ ಫೋನ್‌ಗಳಿಗೆ ಮಾತ್ರ ಬೆಲೆ ಏರಿಕೆಯಾಗಿದೆ. ₹9,999ಕ್ಕೆ ಮಾರಾಟ ಮಾಡಲಾಗುತ್ತಿದ್ದ ಫೋನ್‌, ಈಗ ₹10,499 ಆಗಿದೆ.

ADVERTISEMENT

ಕಚ್ಚಾ ವಸ್ತುಗಳು ಹಾಗೂ ಬಿಡಿ ಭಾಗಗಳ ಪೂರೈಕೆಗೆ ಪರ್ಯಾಯ ಮಾರ್ಗದ ಹುಡುಕಾಟದಲ್ಲಿರುವುದಾಗಿ ಕಂಪನಿ ತಿಳಿಸಿದ್ದಾಗಿ ಗ್ಯಾಡ್ಜೆಟ್ಸ್‌ 360 ವರದಿ ಮಾಡಿದೆ.

ಎಂಐ ಅಧಿಕೃತ ವೆಬ್‌ಸೈಟ್‌ ಹಾಗೂ ಅಮೆಜಾನ್‌ನಲ್ಲಿ ಫೋನ್‌ ಬೆಲೆ ಏರಿಕೆಯಾಗಿರುವುದನ್ನು ಕಾಣಬಹುದಾಗಿದೆ. ಅಮೆಜಾನ್‌ನಲ್ಲಿ ರೆಡ್‌ಮಿ ನೋಟ್‌ 8, ಫೆಬ್ರುವರಿ 18ರಿಂದ ಮತ್ತೆ ಖರೀದಿಗೆ ಸಿಗಲಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.