ADVERTISEMENT

ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 10, 10+ ಮಂಗಳವಾರ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 11:03 IST
Last Updated 18 ಆಗಸ್ಟ್ 2019, 11:03 IST
   

ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಸ್ಯಾಮ್ಸಂಗ್‌, ಭಾರತದ ಮಾರುಕಟ್ಟೆಗೆ ಗ್ಯಾಲಕ್ಸಿ ನೋಟ್‌ 10 ಮತ್ತು ನೋಟ್‌ 10+ ಸ್ಮಾರ್ಟ್‌ಫೋನ್‌ಗಳನ್ನು ಮಂಗಳವಾರ ಬಿಡುಗಡೆ ಮಾಡಲಿದೆ.

ಬೆಂಗಳೂರಿನ ಬ್ರಿಗೆಡ್‌ ರಸ್ತೆಯಲ್ಲಿರುವ ಸ್ಯಾಮ್ಸಂಗ್‌ ಒಪೇರಾ ಹೌಸ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಲಿದೆ.

ಕಂಪ್ಯೂಟರ್, ಗೇಮಿಂಗ್‌ ಕನ್ಸೋಲ್, ಮೂವಿ ಟೆಕ್‌ ಕ್ಯಾಮೆರಾ, ಇಂಟಲಿಜೆಂಟ್ ಪೆನ್‌ ಹೀಗೆ ಎಲ್ಲವನ್ನೂ ಒಂದೇ ಸಾಧನದಲ್ಲಿ ಅನುಭವಿಸುವ ಅವಕಾಶವು ಈ ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ADVERTISEMENT

ವೈಶಿಷ್ಟ್ಯ

ನೋಟ್‌ 10 –ನೋಟ್‌ 10+

ಪರದೆ:6.3 ಇಂಚು - 6.8 ಇಂಚು

ಬ್ಯಾಟರಿ:3,500ಎಂಎಎಚ್ -4,300ಎಂಎಎಚ್

ರ್‍ಯಾಮ್:8ಜಿಬಿ -12ಜಿಬಿ

ಸಂಗ್ರಹಣಾ ಸಾಮರ್ಥ್ಯ:512ಜಿಬಿ1ಟಿಬಿವರೆಗೂ ವಿಸ್ತರಣೆ ಸಾಧ್ಯ.

ಕ್ಯಾಮೆರಾ:4 ಕ್ಯಾಮರಾ,3 ಹಿಂಬದಿ, 1 ಸೆಲ್ಫಿ

ಎಸ್‌ಪೆನ್‌:10 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಬ್ಯಾಟರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.