ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ A series: ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 12:19 IST
Last Updated 29 ಮಾರ್ಚ್ 2022, 12:19 IST
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ ಸರಣಿಯ ಫೋನ್‌ಗಳು
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ ಸರಣಿಯ ಫೋನ್‌ಗಳು   

ಬೆಂಗಳೂರು: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ ಸರಣಿಯ ಐದು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ವಿನ್ಯಾಸ, ಸಾಮರ್ಥ್ಯ, ತಂತ್ರಜ್ಞಾನ ಹಾಗೂ ಬಣ್ಣಗಳಲ್ಲಿ ಬದಲಾವಣೆ ಕಂಡಿರುವ ಗ್ಯಾಲಕ್ಸಿ ಎ13, ಎ23, ಎ33–5ಜಿ, ಎ53–5ಜಿ ಮತ್ತು ಎ73–5ಜಿ ಫೋನ್‌ಗಳು ಹೊರ ಬಂದಿವೆ.

ಗ್ಯಾಲಕ್ಸಿ ಎ73 5ಜಿ ಫೋನ್‌ನಲ್ಲಿ 108ಎಂಪಿ ಕ್ಯಾಮೆರಾ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್(ಒಐಎಸ್), ನೀರು ಮತ್ತು ಧೂಳು ನಿರೋಧಕಕ್ಕೆ ಐಪಿ67 ರೇಟಿಂಗ್, ಸಮರ್ಥ ಕಾರ್ಯಾಚರಣೆಗೆ ಸ್ನ್ಯಾಪ್‌ಡ್ರ್ಯಾಗನ್‌ 778ಜಿ 5ಜಿ ಪ್ರೊಸೆಸರ್ ಮತ್ತು 6.7 ಇಂಚು ಸೂಪರ್ ಅಮೋಲೆಡ್‌+ ಇನ್ಫಿನಿಟಿ ಒ ಡಿಸ್‌ಪ್ಲೇ ಅಳವಡಿಸಲಾಗಿದ್ದು, 120ಹರ್ಟ್ಸ್ ರಿಫ್ರೆಶ್ ರೇಟ್‌ ಹೊಂದಿದೆ. ಗೊರಿಲ್ಲಾ ಗ್ಲಾಸ್ ರಕ್ಷಣೆ ಇದೆ.

ಸ್ಪಷ್ಟ, ಅತ್ಯುತ್ತಮ ಚಿತ್ರಗಳು ಹಾಗೂ ವಿಡಿಯೊಗಳನ್ನು 108ಎಂಪಿ ಕ್ಯಾಮೆರಾದಿಂದ ಪಡೆಯಬಹುದಾಗಿದೆ. ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ ಇದೆ. 5,000ಎಂಎಎಚ್‌ ಬ್ಯಾಟರಿ, 25 ವ್ಯಾಟ್‌ ಚಾರ್ಜಿಂಗ್‌ ವ್ಯವಸ್ಥೆ ಇದೆ. ಸ್ಟೀರಿಯೊ ಸ್ಪೀಕರ್‌ಗಳು ಹಾಗೂ ನಾಕ್ಸ್‌ ಸೆಕ್ಯುರಿಟಿಯನ್ನು ಒಳಗೊಂಡಿದೆ.

ಆರ್‌ಎಎಂ ಪ್ಲಸ್ ನಿಮಗೆ ರ‍್ಯಾಮ್ ಅನ್ನು 16ಜಿಬಿವರೆಗೆ ವಿಸ್ತರಿಸಲು ಅವಕಾಶ ನೀಡುತ್ತದೆ. ಇದು 8ಜಿಬಿ ರ‍್ಯಾಮ್ + 128ಜಿಬಿ ಸಂಗ್ರಹ ಮತ್ತು 8 ಜಿಬಿರ‍್ಯಾಮ್ +256ಜಿಬಿ ಸಂಗ್ರಹ ಸಾಮರ್ಥ್ಯವಿರುವ ಮಾದರಿಗಳಲ್ಲಿ ಸಿಗಲಿದೆ. ಔಟ್-ಆಫ್-ದಿ ಬಾಕ್ಸ್ ಆ್ಯಂಡ್ರಾಯ್ಡ್‌ 12 ಕಾರ್ಯಾಚರಣೆ ವ್ಯವಸ್ಥೆ ಹೊಂದಿದ್ದು, 4 ವರ್ಷಗಳವರೆಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳು ಹಾಗೂ 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ ಸಿಗಲಿದೆ.

ಗ್ಯಾಲಕ್ಸಿ ಎ53 5ಜಿ

ADVERTISEMENT

ಗ್ಯಾಲಕ್ಸಿ ಎ53 5ಜಿ ಫೋನ್‌ನಲ್ಲಿ 64ಎಂಪಿ ಒಐಎಸ್ ಕ್ಯಾಮೆರಾ, ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ, 6.5 ಇಂಚು ಸೂಪರ್ ಅಮೋಲ್ಡ್ ಡಿಸ್‌ಪ್ಲೇ, ಮೃದುವಾದ ಬ್ರೌಸಿಂಗ್‌ಗೆ 120ಹರ್ಟ್ಸ್ ರಿಫ್ರೆಶ್ ರೇಟ್ ಇದೆ. ಇದರಲ್ಲಿ 5ಎನ್‌ಎಂ ಎಕ್ಸಿನೊಸ್ 1280 ಪ್ರೊಸೆಸರ್‌, 5,000ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. 4 ವರ್ಷಗಳವರೆಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳು ಹಾಗೂ 5 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ ಸಿಗಲಿದೆ.

ಗ್ಯಾಲಕ್ಸಿ ಎ33 5ಜಿ

ಗ್ಯಾಲಕ್ಸಿ ಎ33 5ಜಿ ಫೋನ್‌ನಲ್ಲಿ 48ಎಂಪಿ ಮುಖ್ಯ ಕ್ಯಾಮೆರಾ, ಸೆಲ್ಫಿಗಾಗಿ 13ಎಂಪಿ ಕ್ಯಾಮೆರಾ, 5ಎನ್‌ಎಂ ಎಕ್ಸಿನೊಸ್ 1280 ಪ್ರೊಸೆಸರ್, 6.4 ಇಂಚು ಸೂಪರ್ ಅಮೋಲ್ಡ್ ಡಿಸ್‌ಪ್ಲೇ, 90ಹರ್ಟ್ಸ್ ರಿಫ್ರೆಶ್ ರೇಟ್ ಇದೆ. 5,000ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. 3 ವರ್ಷಗಳವರೆಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳು ಹಾಗೂ 4 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ ಸಿಗಲಿದೆ.

ಗ್ಯಾಲಕ್ಸಿ ಎ23

ಗ್ಯಾಲಕ್ಸಿ ಎ23 4ಜಿ ಫೋನ್‌ 6.6 ಇಂಚು ಎಫ್‌ಎಚ್‌ಡಿ+ ಡಿಸ್‌ಪ್ಲೇ, 90ಹರ್ಟ್ಸ್ ರಿಫ್ರೆಶ್ ರೇಟ್‌ ಹೊಂದಿದೆ. 50 ಎಂಪಿ ಮುಖ್ಯ ಕ್ಯಾಮೆರಾ, ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. ಸ್ನ್ಯಾಪ್‌ಡ್ರ್ಯಾಗನ್‌ 680 4ಜಿ ಪ್ರೊಸೆಸರ್, 5,000ಎಂಎಎಚ್‌ ಬ್ಯಾಟರಿ ಇದೆ. 2 ವರ್ಷಗಳವರೆಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳು ಹಾಗೂ 4 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ ಸಿಗಲಿದೆ.

ಗ್ಯಾಲಕ್ಸಿ ಎ13

ಗ್ಯಾಲಕ್ಸಿ ಎ13 ಫೋನ್‌ 6.6-ಇಂಚು ಎಫ್‌ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. 50ಎಂಪಿ ಮುಖ್ಯ ಕ್ಯಾಮೆರಾ, ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಅಳವಡಿಸಲಾಗಿದೆ. ಎಕ್ಸಿನೋಸ್‌ 850 ಪ್ರೊಸೆಸರ್‌, 5,000ಎಂಎಎಚ್‌ ಬ್ಯಾಟರಿ ಇದೆ. 2 ವರ್ಷಗಳವರೆಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ಗಳು ಹಾಗೂ 4 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ ಸಿಗಲಿದೆ.

ಫೋನ್‌ಗಳ ಬೆಲೆ ವಿವರ:

ಗ್ಯಾಲಕ್ಸಿ ಎ53 5ಜಿ, ಗ್ಯಾಲಕ್ಸಿ ಎ33 5ಜಿ, ಗ್ಯಾಲಕ್ಸಿ ಎ23 ಮತ್ತು ಗ್ಯಾಲಕ್ಸಿ ಎ13 ಫೋನ್‌ಗಳು ಪೀಚ್, ನೀಲಿ, ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಸಿಗುತ್ತದೆ. ಗ್ಯಾಲಕ್ಸಿ ಎ73 ಮತ್ತು ಎ33 ಫೋನ್‌ಗಳ ಬೆಲೆ ಇನ್ನೂ ಬಹಿರಂಗವಾಗಿಲ್ಲ.

* ಗ್ಯಾಲಕ್ಸಿ ಎ53 5ಜಿಯು 6ಜಿಬಿ+128ಜಿಬಿಗೆ ₹34,499 ಹಾಗೂ 8ಜಿಬಿ+128ಜಿಬಿ ವೇರಿಯೆಂಟ್ ಬೆಲೆ ₹35,999.
* ಗ್ಯಾಲಕ್ಸಿ ಎ23 6ಜಿಬಿ+128ಜಿಬಿಗೆ ₹19,499 ಹಾಗೂ 8ಜಿಬಿ+128ಜಿಬಿ ವೇರಿಯೆಂಟ್ ಬೆಲೆ ₹20,999.
* ಗ್ಯಾಲಕ್ಸಿ ಎ13 4ಜಿಬಿ+64ಜಿಬಿಗೆ₹14,999; 4ಜಿಬಿ+128ಜಿಬಿಗೆ ₹15,999 ಹಾಗೂ 6ಜಿಬಿ+64ಜಿಬಿಗೆ ₹17,499 ಬೆಲೆ ನಿಗದಿಯಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.