ADVERTISEMENT

ಆಸ್ಕರ್ ಅಂಗಳದಲ್ಲಿ ಪ್ರದರ್ಶನಗೊಂಡ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಝಡ್ ಫ್ಲಿಪ್' ಫೋನ್

ಏಜೆನ್ಸೀಸ್
Published 10 ಫೆಬ್ರುವರಿ 2020, 12:12 IST
Last Updated 10 ಫೆಬ್ರುವರಿ 2020, 12:12 IST
ಗ್ಯಾಲಕ್ಸಿ ಝಡ್‌ ಫ್ಲಿಪ್‌ ಫೋನ್‌ - ಚಿತ್ರ ಕೃಪೆ: ಟ್ವಿಟರ್‌
ಗ್ಯಾಲಕ್ಸಿ ಝಡ್‌ ಫ್ಲಿಪ್‌ ಫೋನ್‌ - ಚಿತ್ರ ಕೃಪೆ: ಟ್ವಿಟರ್‌   

ಲಾಸ್‌ ಏಂಜಲೀಸ್: ಸ್ಮಾರ್ಟ್‌ಫೋನ್‌ ತಂತ್ರಜ್ಞಾನದ ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಸ್ಯಾಮ್‌ಸಂಗ್‌ ಬಹುಬೇಗ ಹೊಸತನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದೆ. ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿಸ್ಯಾಮ್‌ಸಂಗ್‌ನ ಹೊಸ ಫೋಲ್ಡೆಬಲ್‌ ಫೋನ್‌ ಟೀಸರ್‌ ಪ್ರದರ್ಶನಗೊಂಡಿದೆ.

ಸ್ಯಾನ್‌ ಫ್ರ್ಯಾನ್ಸಿಸ್ಕೊದಲ್ಲಿ 'ಗ್ಯಾಲಕ್ಸಿ ಝಡ್‌ ಫ್ಲಿಪ್‌ ಫೋನ್‌' ಬಿಡುಗಡೆಗೆ ಎರಡು ದಿನ ಬಾಕಿ ಇರುವಂತೆ ಟಿವಿ ಜಾಹೀರಾತಿನ ಮೂಲಕ ಚೌಕಾಕಾರದ ಮಡಚುವ ಸ್ಮಾರ್ಟ್‌ಫೋನ್‌ ಅನಾವರಣಗೊಂಡಿದೆ. ಕಪ್ಪು ಮತ್ತು ನೇರಳೆ ಬಣ್ಣಗಳಲ್ಲಿಗ್ಯಾಲಕ್ಸಿ ಝಡ್‌ ಫ್ಲಿಪ್‌ ಲಭ್ಯವಿರಲಿದೆ ಎಂಬುದು ವಿಡಿಯೊದಲ್ಲಿ ಕಂಡಿದೆ. ಈಗಾಗಲೇ ಬಿಡುಗಡೆಯಾಗಿರುವ 'ಗ್ಯಾಲಕ್ಸಿ ಫೋಲ್ಡ್‌' ಫೋನ್‌ಗಿಂತಲೂ (₹ 1.65 ಲಕ್ಷ) ಬೆಲೆ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಪುಸ್ತಕದ ರೀತಿ ತೆರೆಯಬಹುದಾದ ಪೋಲ್ಡ್‌ ಫೋನ್‌ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.

ಮಡಚಬಹುದಾದ ಫೋನ್‌ಗಳ ಟ್ರೆಂಡ್‌ ಜೊತೆಯಲ್ಲಿರುವ ಸ್ಯಾಮ್‌ಸಂಗ್‌, ಚೀನಾದ ಸ್ಮಾರ್ಟ್‌ಫೋನ್‌ ಕಂಪನಿಗಳು ಹಾಗೂ ಆ್ಯಪಲ್‌ ಐಫೋನ್‌ಗಳಿಗೆ ತೀವ್ರ ಪೈಪೋಟಿ ನೀಡುವ ಪ್ರಯತ್ನ ನಡೆಸಿದೆ.

ADVERTISEMENT

ಊಹೆಗಳ ಪ್ರಕಾರ, ಝಡ್‌ ಫ್ಲಿಪ್‌ ಫೋಲ್ಡೆಬಲ್‌ ಫೋನ್‌ ಗುಣಲಕ್ಷಣಗಳು:

* ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 855+ ಚಿಪ್‌

* 8 ಜಿಬಿ ರ್‍ಯಾಮ್‌

* 256 ಜಿಬಿ ಸಂಗ್ರಹ ಸಾಮರ್ಥ್ಯ

* 6.7 ಇಂಚು ಫುಲ್‌ ಎಚ್‌ಡಿ+ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ

* 3,300 ಎಂಎಎಚ್‌ ಬ್ಯಾಟರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.