ADVERTISEMENT

ಚೂಟಿ ಜಿಪಿಎಸ್‌ ಯಂತ್ರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 19:30 IST
Last Updated 22 ಫೆಬ್ರುವರಿ 2020, 19:30 IST
ಸಣ್ಣ ಜಿಪಿಎಸ್ ಯಂತ್ರ
ಸಣ್ಣ ಜಿಪಿಎಸ್ ಯಂತ್ರ   

ನಿಮ್ಮ ಕುಟುಂಬದ ಸದಸ್ಯರು ಅಥವಾ ನಿಮ್ಮ ಕಾರು ಯಾವ ಹೊತ್ತಿನಲ್ಲಿ ಎಲ್ಲಿದೆ ಎಂಬುದನ್ನು ನೀವು ಕುಳಿತಿರುವ ಜಾಗದಿಂದಲೇ ತಿಳಿದುಕೊಳ್ಳುವುದು ಸಾಧ್ಯವಾಗಿದೆ. ಇದನ್ನು ಸಾಧ್ಯವಾಗಿಸಿದ್ದು ಜಿಪಿಎಸ್ ಅಥವಾ ಜಿಪಿಆರ್‌ಎಸ್‌ ವ್ಯವಸ್ಥೆ. ಸಣ್ಣದಾದ, ಎಲ್ಲಿಗೆ ಬೇಕಿದ್ದರೂ ಒಯ್ಯಬಹುದಾದ ಚೂಟಿ ಯಂತ್ರಗಳು, ತಾವು ಇರುವುದು ಎಲ್ಲಿ ಎಂಬ ಮಾಹಿತಿಯನ್ನು ರವಾನಿಸುತ್ತವೆ. ಅವು ಹಾಗೆ ಮಾಹಿತಿ ರವಾನೆ ಮಾಡುವುದು ತಮ್ಮ ಜೊತೆ ಸಂಪರ್ಕದಲ್ಲಿ ಇರುವ ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ನಂತಹ ಇನ್ನೊಂದು ಯಂತ್ರಕ್ಕೆ.

ನಿಮ್ಮ ಮಗುವಿನ ಚೀಲದಲ್ಲಿ ಚೂಟಿ ಜಿಪಿಎಸ್‌ ಯಂತ್ರ ಇಟ್ಟಲ್ಲಿ, ಮಗು ಅಪಾಯಕಾರಿ ಸ್ಥಳಕ್ಕೆ ಹೋದರೆ ಆ ಯಂತ್ರ ನಿಮ್ಮನ್ನು ಎಚ್ಚರಿಸಬಲ್ಲದು. ಕೆಲವು ಜಿಪಿಎಸ್‌ ಯಂತ್ರಗಳಲ್ಲಿ ರಕ್ಷಣಾ ಬಟನ್‌ ಇರುತ್ತದೆ. ಅದನ್ನು ಒತ್ತಿದರೆ, ಯಂತ್ರವು ತಾನಿರುವ ಸ್ಥಳದ ಬಗ್ಗೆ ತಕ್ಷಣ ಮಾಹಿತಿ ರವಾನೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT