ADVERTISEMENT

Xiaomi Mi 10i: ದೇಶದ ಮಾರುಕಟ್ಟೆಗೆ ಶಿಯೋಮಿ ಹೊಸ ಫೋನ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 9:10 IST
Last Updated 6 ಜನವರಿ 2021, 9:10 IST
ಶಿಯೋಮಿ Mi 10i
ಶಿಯೋಮಿ Mi 10i   

ಶಿಯೋಮಿಯ ಜನಪ್ರಿಯ ಎಂಐ ಸರಣಿಯಲ್ಲಿ ಆಕರ್ಷಕ ಫೋನ್ ಒಂದನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶಿಯೋಮಿ ಎಂಐ ಮತ್ತು ರೆಡ್ಮಿ ಫೋನ್ ಹೆಚ್ಚು ಮಾರಾಟ ದಾಖಲೆ ಕೂಡ ಹೊಂದಿದೆ. ಈ ಬಾರಿ ಎಂಐ ಸರಣಿಯಲ್ಲಿ ಶಿಯೋಮಿ ಹೊಸದಾಗಿ Mi 10i ಫೋನ್ ಪರಿಚಯಿಸಿದೆ.

ಬೆಲೆ ಮತ್ತು ಲಭ್ಯತೆ

ಹೊಸ ಶಿಯೋಮಿ Mi 10i ಫೋನ್, ದೇಶದಲ್ಲಿ ಮೂರು ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಜನವರಿ 8ರಿಂದ ಹೊಸ ಫೋನ್ ದೇಶದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅಮೆಜಾನ್.ಇನ್, ಎಂಐ.ಕಾಂ, ಎಂಐ ಹೋಮ್ ಮೂಲಕ ಹೊಸ ಶಿಯೋಮಿ Mi 10i ಫೋನ್ ಖರೀದಿಸಬಹುದು.

ADVERTISEMENT

6 GB+64 GB ಮಾದರಿಗೆ ₹20,999, 6 GB+128 GB ಆವೃತ್ತಿಗೆ ₹21,999 ಮತ್ತು 8 GB+128 GB ಆವೃತ್ತಿಗೆ ₹23,999 ದರವಿದೆ. ಮಿಡ್ ನೈಟ್ ಬ್ಲ್ಯಾಕ್, ಅಟ್ಲಾಂಟಿಕ್ ಬ್ಲೂ ಮತ್ತು ಪೆಸಿಫಿಕ್ ಸನ್ ರೈಸ್ ಎಂಬ ಮೂರು ಬಣ್ಣಗಳಲ್ಲಿ ಹೊಸ ಫೋನ್ ದೊರೆಯಲಿದೆ.

ಡಿಸ್ಕೌಂಟ್ ಆಫರ್

ಹೊಸ ಶಿಯೋಮಿ Mi 10i ಫೋನ್ ಖರೀದಿಗೆ ಗ್ರಾಹಕರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಎಂಐ.ಕಾಂ ಮತ್ತು ಅಮೆಜಾನ್ ಮೂಲಕ ಇಎಂಐಆಯ್ಕೆಯಡಿ ಖರೀದಿಸಿದರೆ 2,000 ರೂ. ಡಿಸ್ಕೌಂಟ್ ಆರಂಭಿಕ ಕೊಡುಗೆಯ ಪ್ರಯೋಜನ ಪಡೆಯಬಹುದು.

ಶಿಯೋಮಿ Mi 10i ತಾಂತ್ರಿಕ ವೈಶಿಷ್ಟ್ಯ

ಹೊಸ ಶಿಯೋಮಿ ಫೋನ್ 5G ಬೆಂಬಲ ಹೊಂದಿದ್ದು, ಒನ್ ಪ್ಲಸ್ ನಾರ್ಡ್ ಮತ್ತು ಮೋಟೊ ಜಿ 5G ಫೋನ್ ಗೆ ಸ್ಪರ್ಧೆ ಒಡ್ಡಲಿದೆ.

ಡಿಸ್ಪ್ಲೇ:6.67 ಇಂಚಿನ ಫುಲ್ HD+ ಡಿಸ್ಪ್ಲೇ ಮತ್ತು120Hz ರಿಫ್ರೆಶ್ ರೇಟ್, HDR10+ ಹೊಂದಿದೆ.

ಪ್ರೊಸೆಸರ್:ಒಕ್ಟಾ ಕೋರ್Snapdragon 750G SoC ಮತ್ತು Adreno 619 GPU ಬೆಂಬಲ ಹೊಂದಿದೆ.

RAM+ಮೆಮೊರಿ:6GB+64GB, 6GB+128GB ಹಾಗೂ 8GB+128GB

ಓಎಸ್:Android 10 ಆಧಾರಿತ MIUI 12

ಹಿಂಬದಿ ಕ್ಯಾಮರಾ:108+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ವಾಡ್ ಕ್ಯಾಮರಾ

ಸೆಲ್ಫಿ ಕ್ಯಾಮರಾ:16 ಮೆಗಾಪಿಕ್ಸೆಲ್

ಬ್ಯಾಟರಿ:4820mAh ಬ್ಯಾಟರಿ ಜತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.