ADVERTISEMENT

ಹೊಸ ಹೇರ್ ಟ್ರಿಮ್ಮರ್ ಬಿಡುಗಡೆ ಮಾಡಿದ ಶಿಯೋಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2021, 5:59 IST
Last Updated 30 ಸೆಪ್ಟೆಂಬರ್ 2021, 5:59 IST
ಶಿಯೋಮಿ ಬಿಯರ್ಡ್ ಟ್ರಿಮ್ಮರ್ 2
ಶಿಯೋಮಿ ಬಿಯರ್ಡ್ ಟ್ರಿಮ್ಮರ್ 2   

ಬೆಂಗಳೂರು: ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್ ಶಿಯೋಮಿ, ಗ್ಯಾಜೆಟ್ ಕ್ಷೇತ್ರದಲ್ಲೂ ವಿವಿಧ ಮಾದರಿಗಳನ್ನು ಪರಿಚಯಿಸಿದೆ.

ಶಿಯೋಮಿ, ಈ ಬಾರಿ ಗಡ್ಡ ಟ್ರಿಮ್ ಮಾಡಲು ‘ಶಿಯೋಮಿ ಬಿಯರ್ಡ್ ಟ್ರಿಮ್ಮರ್ 2’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ವಾಟರ್ ರೆಸಿಸ್ಟ್, ಎಲ್‌ಇಡಿ ಬ್ಯಾಟರಿ ಡಿಸ್‌ಪ್ಲೇ ಮತ್ತು ವಿವಿಧ ಉಪಯುಕ್ತ ಸೆಟ್ಟಿಂಗ್ಸ್ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ADVERTISEMENT

ಹೊಸ ಶಿಯೋಮಿ ಬಿಯರ್ಡ್ ಟ್ರಿಮ್ಮರ್ 2 ಬೆಲೆ ದೇಶದಲ್ಲಿ ₹1,999 ಇದ್ದು, ಆರಂಭಿಕ ಕೊಡುಗೆಯಾಗಿ ₹1,799ಕ್ಕೆ ಲಭ್ಯವಾಗುತ್ತಿದೆ. ಎಂಐ ಸ್ಟೋರ್, ಅಮೆಜಾನ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ ಮೂಲಕ ಅಕ್ಟೋಬರ್‌ 3 ರಿಂದ ದೊರೆಯಲಿದೆ.

ಬಿಯರ್ಡ್ ಟ್ರಿಮ್ಮರ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹೊಂದಿದ್ದು, 120 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.